RNI NO. KARKAN/2006/27779|Saturday, April 20, 2024
You are here: Home » breaking news » ಗೋಕಾಕ:ಪಿಡಿಓ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಗೋಕಾಕಿನಲ್ಲಿ ಪ್ರತಿಭಟನೆ

ಗೋಕಾಕ:ಪಿಡಿಓ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಗೋಕಾಕಿನಲ್ಲಿ ಪ್ರತಿಭಟನೆ 

ಪಿಡಿಓ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಗೋಕಾಕಿನಲ್ಲಿ ಪ್ರತಿಭಟನೆ

ಗೋಕಾಕ ಅ 24: ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಸೋಮಲಿಂಗ ಪಾಟೀಲ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದವರನ್ನು ಗೂಂಡಾ ಕಾಯ್ದೆಯಡಿ ಕ್ರೀಮಿನಲ್ ಮೊಕದಮ್ಮೆ ದಾಖಲಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ಇಲ್ಲಿಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖಾ ನೌಕರರ ಸಂಘದ ವತಿಯಿಂದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ.ಚಿನ್ನನವರ ಅವರ ಮುಖಾಂತರ ತಹಶೀಲದಾರ ಅವರಿಗೆ ಮನವಿ ಸಲ್ಲಿಸಿದರು.

ಬುಧವಾರದಂದು ತಾಲೂಕಾ ಪಂಚಾಯತಿ ಬಳಿ ಜಮಾಯಿಸಿದ ನೌಕರರು, ಕರ್ತವ್ಯ ನಿರತ ಪಿಡಿಓ ಸೋಮಲಿಂಗ ಪಾಟೀಲ ಅವರ ಮೇಲೆ ಕುಲ್ಲಕ್ಷ ಕಾರಣದಿಂದ ಹಾಗೂ ನಿಯಮಬಾಹಿರವಾಗಿ ಬಿಲ್ಲು ತೆಗೆದುಕೊಡಲಿಲ್ಲ ಎಂದು ಕೆಲವು ಸ್ಥಳಿಯರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ಖಂಡನೀಯವಾಗಿದೆ ಎಂದು ಹೇಳಿದರು.
ಇತ್ತಿಚೆಗೆ ಬೆಳಗಾವಿ ಜಿಲ್ಲೆಯಲ್ಲಿ ನಿಯಮಾನುಸಾರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಓಗಳ ಮೇಲೆ ಗ್ರಾ.ಪಂ ಸದಸ್ಯರು, ಅವರ ಸಂಬಂಧಿಕರು ಹಾಗೂ ಸ್ಥಳೀಯರು ಹಲ್ಲೆ ನಡೆಸುತ್ತಿರುವುದು ಸಾಮಾನ್ಯವಾಗಿದ್ದು ಇಂಥಹ ಘಟನೆಗಳ ಕುರಿತು ಹಲವಾರು ಬಾರಿ ಮನವಿಗಳನ್ನು ನೀಡಿದರೂ ಜಿಲ್ಲಾಡಳಿತದಿಂದ ಯಾವುದೇ ಕಟ್ಟುನಿಟ್ಟಿನ ಕ್ರಮ ಹಲ್ಲೆ ನಡೆಸಿರುವವರ ಮೇಲೆ ಜರುಗಿಸಿರುವದಿಲ್ಲ. ಪದೇ ಪದೆ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಪಂಚಾಯತಿ ನೌಕರರು ಪ್ರಾಣ ಭೀತಿಯಿಂದ ಹೆದರುವ ಪರಿಸ್ಥಿತಿ ತಲೆದೂರಿದ್ದು, ಇಂತಹ ಘಟನೆಗಳಿಗೆ ಕಾರಣವಾದವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ತಪ್ಪಿದ್ದಲ್ಲಿ ಅನಿವಾರ್ಯವಾಗಿ ಗ್ರಾಮ ಪಂಚಾಯತಿಗಳ ಕೆಲಸ ನಿಲ್ಲಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಬೇಕಾಗುತ್ತದೆ ಎಂದು ನೌಕರರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖಾ ನೌಕರರ ಸಂಘದ ತಾಲೂಕಾಧ್ಯಕ್ಷ ಎಸ್.ಎಚ್.ದೇಸಾಯಿ, ಉಪಾಧ್ಯಕ್ಷ ವಿ.ನಾಗರಾಜು, ಮಹೇಶ ಯಡವಣ್ಣವರ, ಉಮೇಶ ಮನಗೂಳಿ, ವೀರಭದ್ರ ಗುಂಡಿ, ಪ್ರಕಾಶ ಮರಾಚಿ, ಎಚ್.ಎನ್.ಬಾವಿಕಟ್ಟಿ ಆನಂದ ಪುಡಕಲಕಟ್ಟಿ ಸೇರಿದಂತೆ ಅನೇಕರು ಇದ್ದರು.

Related posts: