RNI NO. KARKAN/2006/27779|Saturday, June 14, 2025
You are here: Home » breaking news » ಗೋಕಾಕ:ನಗರದಲ್ಲಿ ಶ್ರದ್ಧಾ–ಭಕ್ತಿಯಿಂದ ಬಕ್ರೀದ್‌ ಹಬ್ಬ ಆಚರಣೆ

ಗೋಕಾಕ:ನಗರದಲ್ಲಿ ಶ್ರದ್ಧಾ–ಭಕ್ತಿಯಿಂದ ಬಕ್ರೀದ್‌ ಹಬ್ಬ ಆಚರಣೆ 

ನಗರದಲ್ಲಿ ಶ್ರದ್ಧಾ–ಭಕ್ತಿಯಿಂದ ಬಕ್ರೀದ್‌ ಹಬ್ಬ ಆಚರಣೆ

ಗೋಕಾಕ ಜೂ 7 : ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಮುಸ್ಲಿಂ ಬಾಂಧವರು ನಗರದಲ್ಲಿ ಶ್ರದ್ಧಾ–ಭಕ್ತಿಯಿಂದ ಆಚರಿಸಿದರು.
ನಗರದ ಈದ್ಗಾ ಮೈದಾನದಲ್ಲಿ ಶನಿವಾರದಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಸಕಲ ಜೀವರಾಶಿಗೆ ಒಳಿತಾಗುವಂತೆ ದೇವರಲ್ಲಿ ಪ್ರಾರ್ಥಿಸಿದರು.

ಹಬ್ಬದ ಅಂಗವಾಗಿ ಶ್ವೇತವಸ್ತ್ರ ಧರಿಸಿ, ರಂಗು ರಂಗಿನ ಟೋಪಿಗಳನ್ನು ತೊಟ್ಟು ಪ್ರಾರ್ಥನೆಗೆ ಈದ್ಗಾ ಮೈದಾನಕ್ಕೆ ಆಗಮಿಸಿದರು. ಸಾವಿರಾರು ಜನರು ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸುವುದು ಹಬ್ಬದ ವಾಡಿಕೆ. ಮೌಲ್ವಿ, ಧರ್ಮ ಗುರುಗಳ ಉಪದೇಶ ಆಲಿಸಿ ಹಬ್ಬ ಆಚರಿಸಿದರು.

ಪ್ರಾರ್ಥನೆ ಬಳಿಕ ಒಬ್ಬರನೊಬ್ಬರು ಆಲಂಗಿಸಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಗರದ ಪ್ರಮುಖ ಸ್ಥಳಗಳಲ್ಲಿ ಸಿಪಿಐ ಸುರೇಶ್ ಬಾಬು ಮತ್ತು ಪಿಎಸ್ಐ ಕೆ.ವಾಲಿಕರ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ತಾಲೂಕಿನ ಅಮೀರಸಾಬ ಹಾಜಿ ಕುತಬುದ್ದೀನ ಬಸ್ಸಾಪೂರಿ, ಅಂಜುಮನ ಇಸ್ಲಾಂ ಕಮಿಟಿಯ ಅಧ್ಯಕ್ಷ ಜಾವೇದ್ ಗೋಕಾಕ, ನಗರಸಭೆ ಸದಸ್ಯರಾದ ಅಬ್ದುಲರಹೆಮಾನ ದೇಸಾಯಿ, ಕುತುಬುದ್ದೀನ ಗೋಕಾಕ, ಮುಖಂಡರುಗಳಾದ ಇಲಾಹಿ ಖೈರದಿ, ಮಲೀಕ ಪೈಲವಾನ್, ಇಸ್ಮಾಯಿಲ್ ಜಮಾದಾರ, ಇಸ್ಮಾಯಿಲ್ ಗೋಕಾಕ, ಮುಸ್ತಾಕ ಖಂಡಾಯತ್, ಜಾಕೀರ್ ಕುಡಚಿಕರ, ಜಹಾಂಗೀರ ಜಮಾದಾರ ಸೇರಿದಂತೆ ಅನೇಕ ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.

Related posts:

ಯಮಕನಮರಡಿ:ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಸಮುದಾಯದವರು ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತೆ : ಸಚಿವ ಸತೀಶ

ಗೋಕಾಕ:ಪ್ರಧಾನಿ ಮೋದಿಯವರು ನಡೆಸಿದ ವಿಡಿಯೋ ಕಾನ್ಫರೇನ್ಸ್ ಯನ್ನು ಕಾರ್ಯಕರ್ತರೊಂದಿಗೆ ವೀಕ್ಷಣೆ ಮಾಡಿದ ಶಾಸಕ ರಮೇಶ ಜಾರಕ…

ಮೂಡಲಗಿ:ಹಣಕ್ಕಾಗಿ ಹನಿ ಟ್ರ್ಯಾಪ್ ಮಾಡಿದವರ ಮೇಲೆ ಬಿತ್ತು ಕೇಸ್ : 9 ಲಕ್ಷ ಪಡೆದುಕೊಂಡು ಮತ್ತೆ 1 ಲಕ್ಷಕ್ಕೆ ಬೇಡಿಕೆ ಇಟ…