ಗೋಕಾಕ:ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ : ಮುಸ್ಲಿಂ ಸಮುದಾಯದ ಸಾವಿರಾರು ಜನರಿಂದ ಸಾಮೂಹಿಕ ಪ್ರಾರ್ಥನೆ

ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ : ಮುಸ್ಲಿಂ ಸಮುದಾಯದ ಸಾವಿರಾರು ಜನರಿಂದ ಸಾಮೂಹಿಕ ಪ್ರಾರ್ಥನೆ
ಗೋಕಾಕ ಮಾ 31 : ನಗರದಲ್ಲೆಡೆ ಮುಸ್ಲಿಂ ಬಾಂಧವರು ಸೋಮವಾರದಂದು ರಂಜಾನ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿ, ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು.
ನಗರದ ಅಬ್ದುಲ್ ಕಲಾಂ ಕಾಲೇಜಿನ ಈದ್ಗಾ ಮೈದಾನ ಹಾಗೂ ನಗರದ ಇತರ ಮಸೀದಿಗಳಲ್ಲಿ ಸೋಮವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬಕ್ಕೆ ತೆರೆ ಎಳೆದರು.
ಒಂದು ತಿಂಗಳು ಉಪವಾಸ ಆಚರಿಸಿದ ಬಳಿಕ ಜಕಾತ್, ಫಿತ್ರ ದಾನ ಮಾಡಿದರು. ಶ್ವೇತವಸ್ತ್ರ ಧರಿಸಿ ಗುಂಪು ಗುಂಪಾಗಿ ಖಬರ್‌ಸ್ಥಾನ ಹಾಗೂ ಮಸೀದಿಗಳತ್ತ ಬಂದ ಮುಸ್ಲಿಮರು ಮೊದಲು ಸಿಹಿ ಹಂಚಿ, ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಹೊಸ ಬಟ್ಟೆಗಳಲ್ಲಿ, ಸಾಂಪ್ರದಾಯಿಕ ಪೋಷಾಕುಗಳಲ್ಲಿ ಕಂಗೊಳಿಸುತ್ತಿದ್ದ ಮಕ್ಕಳು ಹಬ್ಬದ ಸಂಭ್ರಮ ಹೆಚ್ಚಿಸಿದ್ದರು.
ಇದೇ ಸಂದರ್ಭದಲ್ಲಿ ಎಲ್ಲಾ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ತಮ್ಮ ಭುಜಕ್ಕೆ ಕಪ್ಪ ಪಟ್ಟಿ ಕಟ್ಟಿಕೊಂಡು ವಕ್ಫ್ ಕಾನೂನನ್ನು ಬಲವಾಗಿ ವಿರೋಧಿಸಿದರು.
ಈ ಸಂದರ್ಭದಲ್ಲಿ ಮೌಲಾನಾ ತಲಹಾಸಾಬ ಕಟಹಾರಿ, ಅಮೀರಸಾಬ ಹಾಜಿ ಕುತುಬುದ್ದೀನ ಬಸ್ಸಾಪೂರ, ಅಂಜುಮನ ಅಧ್ಯಕ್ಷ ಜಾವೇದ್ ಗೋಕಾಕ, ನಗರಸಭೆ ಸದಸ್ಯರುಗಳಾದ ಅಬ್ಬಾಸ್ ದೇಸಾಯಿ, ಕುತುಬುದ್ದೀನ ಗೋಕಾಕ, ಯೂಸುಫ್ ಅಂಕಲಗಿ, ಮುಖಂಡರುಗಳಾದ ಡಾ.ಅಬ್ದುಲ್ ವಹಾಬ ಜಮಾದಾರ, ಬುಡ್ಡೆಸಾಬ ಶಾಬಾಶಖಾನ, ಇಸ್ಮಾಯಿಲ್ ಗೋಕಾಕ, ದಸ್ತಗಿರಿ ಪೈಲವಾನ, ರಿಯಾಜ ಖತೀಬ, ದಸ್ತಗಿರಿ ಮಲ್ಲಾಪೂರ, ರಸೂಲ ದೇಸಾಯಿ, ಜುಬೇರ ತ್ರಾಸಗರ, ಜಾಕೀರ ನಾಯಿಕ, ಇಸ್ಮಾಯಿಲ್ ಜಮಾದಾರ, ಅಲ್ಲಾಭಕ್ಷ ಮುಲ್ಲಾ ಸೇರಿದಂತೆ ಸಾವಿರಾರು ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.