ಗೋಕಾಕ:ಯಾಂತ್ರಿಕ ಜೀವನದಲ್ಲಿ ಪರಿಸರ ನಾಶ ಆಗುವುದರೊಂದಿಗೆ ಪ್ರಾಣಿ ಪಕ್ಷಿಗಳ ಸಂತತಿಯು ನಾಶವಾಗುತ್ತಿದೆ : ಡಿಎಫ್ಓ ಶಿವಾನಂದ

ಯಾಂತ್ರಿಕ ಜೀವನದಲ್ಲಿ ಪರಿಸರ ನಾಶ ಆಗುವುದರೊಂದಿಗೆ ಪ್ರಾಣಿ ಪಕ್ಷಿಗಳ ಸಂತತಿಯು ನಾಶವಾಗುತ್ತಿದೆ : ಡಿಎಫ್ಓ ಶಿವಾನಂದ
ಗೋಕಾಕ ಮಾ 29 : ಪರಿಸರವನ್ನು ಉಳಿಸಿ ಜೀವಿಗಳ ಸಂರಕ್ಷಿಸುವ ಜವಾಬ್ದಾರಿ ನಮ್ಮಲ್ಲರ ಮೇಲಿದೆ ಎಂದು ಘಟಪ್ರಭಾ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಿಕವಾಡಿ ಹೇಳಿದರು.
ಶನಿವಾರದಂದು ನಗರದ ಗೋಕಾಕ ಶಿಕ್ಷಣ ಮಹಾವಿದ್ಯಾಲಯದ ಬಿ.ಎಡ್ ಕಾಲೇಜಿನ ಸಭಾಂಗಣದಲ್ಲಿ ಘಟಪ್ರಭಾ ಪ್ರಾದೇಶಿಕ ಅರಣ್ಯ ವಿಭಾಗ, ಗೋಕಾಕ ಅರಣ್ಯ ವಲಯ ಹಾಗೂ ಗೋಕಾಕ ಶಿಕ್ಷಣ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಗುಬ್ಬಚ್ಚಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯಾಂತ್ರಿಕ ಜೀವನದಿಂದ ಪರಿಸರ ನಾಶ ಆಗುವುದರೊಂದಿಗೆ ಪ್ರಾಣಿ ಪಕ್ಷಿಗಳ ಸಂತತಿಯು ನಾಶವಾಗುತ್ತಿದೆ. ಅಭಿವೃದ್ಧಿಯೊಂದಿಗೆ ಪರಿಸರ ಸಮತೋಲನವನ್ನು ಕಾಪಾಡಬೇಕು. ಮಾನವರಿಗಿಂತ ಮುಂಚೆ ಹುಟ್ಟಿದ ಗುಬ್ಬಚ್ಚಿಗಳು ಇಂದು ವಿನಾಶದ ಅಂಚಿನಲ್ಲಿವೆ. ಅವುಗಳು ಬದುಕಲು ಪೂರಕವಾದ ವಾತಾವರಣ ಕಲ್ಪಿಸಿ ಅವುಗಳ ಸಂತತಿಯನ್ನು ರಕ್ಷಿಸಿ ಮುಂದಿನ ಪಿಳಿಗೆಗೆ ಕೊಡುಗೆಯಾಗಿ ನೀಡುವಂತೆ ಕರೆ ನೀಡಿದರು..
ಅತಿಥಿಗಳಾಗಿ ಆಗಮಿಸಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ ಪ್ರಭಾಕರ ಮಾತನಾಡಿ ರಾಸಾಯನಿಕಯುಕ್ತ ಆಹಾರ, ಮೊಬೈಲ್ ರಿಡೆಯೇಷನ್ ಹಾಗೂ ಕಾಂಕ್ರೀಟ್ ನಾಡಿನಿಂದ ಗುಬ್ಬಚ್ಚಿಗಳ ಸಂತತಿ ಕಡಿಮೆಯಾಗುತ್ತಿದೆ. ಅವುಗಳ ರಕ್ಷಣೆಗೆ ಗುಡುಗಳ ನಿರ್ಮಾಣ ಸಾವಯವ ಆಹಾರ ಹಾಗೂ ರಿಡೆಯೇಷನ್ ಮುಕ್ತ ವಾತಾವರಣವನ್ನು ಕಲ್ಪಿಸಿ ಅವುಗಳ ಸಂತತಿಯನ್ನು ಹೆಚ್ಚಿಸುವ ಕಾರ್ಯಕ್ಕೆ ಜನತೆ ಸಹಕಾರ ನೀಡುವಂತೆ ಕೋರಿದ ಅವರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ರಕ್ಷಿಸುವಂತೆ ಹೇಳಿದರು.
ವೇದಿಕೆಯಲ್ಲಿ ಬಿ.ಹೆಡ್ ಕಾಲೇಜಿನ ಪ್ರಾಚಾರ್ಯ ವ್ಹಿ.ವ್ಹಿ. ಮೋದಿ, ಪಕ್ಷಿ ತಜ್ಞ ಪ್ರಕಾಶ್ ಗೌಡರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಾಸಿಮ್ ತೆನಗಿ, ನಾಗರಾಜ್ ಭೀಮಗೌಡ, ವಲಯ ಅರಣ್ಯ ಅಧಿಕಾರಿ ಆನಂದ ಹೆಗಡೆ ಉಪಸ್ಥಿತರಿದ್ದರು.