ಗೋಕಾಕ:ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ ಶಿಕ್ಷಕರು ಭೋಧನೆ ಮಾಡಬೇಕು :ಉಮಾಪತಿ ಹಿರೇಮಠ

ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ ಶಿಕ್ಷಕರು ಭೋಧನೆ ಮಾಡಬೇಕು :ಉಮಾಪತಿ ಹಿರೇಮಠ
ಗೋಕಾಕ ಜ 10 : ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ ಶಿಕ್ಷಕರು ಹೊಂದಾಣಿಕೆ ಮಾಡಿಕೊಂಡು.ವಿದ್ಯಾರ್ಥಿಗಳಿಗೆ ಭೋಧನೆ ಮಾಡಬೇಕು ಎಂದು ಖನಗಾಂವ ಆದರ್ಶ ವಿದ್ಯಾಲಯದ ಸಹ ಶಿಕ್ಷಕ ಉಮಾಪತಿ ಹಿರೇಮಠ ಹೇಳಿದರು.
ಗುರುವಾರದಂದು ನಗರದ ಗೋಕಾಕ ಶಿಕ್ಷಣ ಸಂಸ್ಥೆಯ ಆದರ್ಶ ಕನ್ನಡ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಜಿ.ಇ.ಎಸ್ ಪ್ರೌಢ ಶಾಲೆಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಪರಿಸರ ಉಳಿಸುವ ಮತ್ತು ಬೆಳಸುವ ಪ್ರವೃತ್ತಿಯನ್ನು ಬೆಳಸಿಕೊಳ್ಳಬೇಕು. ಪರಿಸರ ಮಹತ್ವದ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಬೇಕು.
ಕೆಲ ವಿದ್ಯಾರ್ಥಿಗಳು ಜ್ಞಾನದಾರಿತವಾಗಿ ತಮ್ಮ ಜೀವನವನ್ನು ರೂಪಿಕೊಂಡರೆ ಇನ್ನು ಕೆಲ ವಿದ್ಯಾರ್ಥಿಗಳು ಕೌಶಲ್ಯದಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಪಾಲಕರು ತಮ್ಮ ಮಕ್ಟಳನ್ನು ಇನ್ನೊಬ್ಬ ಮಗುವಿನೊಂದಿಗೆ ಹೊಂದಾಣಿಕೆ ಮಾಡದೆ ಮಕ್ಕಳ ಅಭಿರುಚಿಗೆ ತಕ್ಕಂತೆ ಅವರನ್ನು ಪ್ರೋತ್ಸಾಹಿಸಿ ಪ್ರತಿಭಾವಂತರನ್ನಾಗಿ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಎಂ.ಡಿ.ಚುನಮರಿ ವಹಿಸಿದ್ದರು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಆರ್.ಎಂ.ವಾಲಿ, ನಿರ್ದೇಶಕರುಗಳಾದ ಮಹಾಂತೇಶ ತಾವಂಶಿ, ಪಿ.ಎಂ ಕೋಲಾರ, ಮುಖ್ಯೋಪಾಧ್ಯಾಯರುಗಳಾದ ಶ್ರೀಮತಿ ಎ.ಎಂ. ಶೆಟ್ಟೆನ್ನವರ, ಶ್ರೀಮತಿ ಎಸ್.ಎಸ್. ಇಜೇರೆ ವಿದ್ಯಾರ್ಥಿ ಪ್ರತಿನಿಧಿಗಳಾದ ಮನೋಹರ ಕಪರಟ್ಟಿ, ಅರ್ಪಿತಾ ಕಲ್ಯಾಣಶೆಟ್ಟಿ ಉಪಸ್ಥಿತರಿದ್ದರು.