RNI NO. KARKAN/2006/27779|Saturday, February 14, 2026
You are here: Home » breaking news » ಘಟಪ್ರಭಾ :ಬಯಲು ಶೌಚಾಲಯ ಮುಕ್ತ ರಾಜ್ಯ ಮಾಡಲು ಗ್ರಾಮ ಮಟ್ಟದಿಂದಲೇ ಕಾಂತ್ರಿ ಯಾಗಬೇಕು : ಶಿಕ್ಷಕ ಜಿ.ಎಲ್.ಕೋಳಿ ಕರೆ

ಘಟಪ್ರಭಾ :ಬಯಲು ಶೌಚಾಲಯ ಮುಕ್ತ ರಾಜ್ಯ ಮಾಡಲು ಗ್ರಾಮ ಮಟ್ಟದಿಂದಲೇ ಕಾಂತ್ರಿ ಯಾಗಬೇಕು : ಶಿಕ್ಷಕ ಜಿ.ಎಲ್.ಕೋಳಿ ಕರೆ 

ಬಯಲು ಶೌಚಾಲಯ ಮುಕ್ತ ರಾಜ್ಯ ಮಾಡಲು ಗ್ರಾಮ ಮಟ್ಟದಿಂದಲೇ ಕಾಂತ್ರಿ ಯಾಗಬೇಕು : ಶಿಕ್ಷಕ ಜಿ.ಎಲ್.ಕೋಳಿ ಕರೆ

ಘಟಪ್ರಭಾ ಸೆ 5: ಬಯಲು ಶೌಚಾಲಯ ಮುಕ್ತ ರಾಜ್ಯ ಮಾಡಲು ಗ್ರಾಮ ಮಟ್ಟದಿಂದಲೇ ಕಾಂತ್ರಿ ಆಗ ಬೇಕೆಂದು ಹುಣಶ್ಯಾಳ ಪಿ.ಜಿ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಎಲ್ .ಕೋಳಿ ಹೇಳಿದರು

ಅವರು ಸೋಮವಾರದಂದು ಹುಣಶ್ಯಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮಂಜೂರಾದ ಬೈಸಿಕಲ್‍ಗಳನ್ನು ಹಾಗೂ ಸಮವಸ್ತ್ರ ಮತ್ತು ಶೂ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು

ಸರಕಾರ ವಿದ್ಯಾರ್ಥಿಗಳಿಗೆ ಹಲವಾರು ಯೋಜನೆಗಳನ್ನು ರೂಪಿಸಿದೆ ಮಕ್ಕಳು ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ತಮ್ಮ ವಿದ್ಯಾರ್ಥಿ ಜೀವನವನ್ನು ಪಾವನ ಗೋಳಿಸಿಕೊಳ್ಳಬೇಕು ಪಾಲಕರು ತಮ್ಮ ಮಕ್ಕಳ ಶೇಯೊಭಿವೃದಿಗೆ ಶ್ರಮಿಸಿ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಬೇಕು ಪ್ರತಿಯೋಬ್ಬ ಪಾಲಕರು ಸ್ವಚ್ಛತೆ ಬಗೆ ಗಮನ ಹರಸಿ ನಮ್ಮ ನಾಡನ್ನು ಸದೃಢ ಮಾಡಲು ಮುಂದಾಗಬೇಕೆಂದು ಕರೆ ನೀಡಿದರು
ಹುಣಶ್ಯಾಳ ಪಿ.ಜಿ ಗ್ರಾಮದ ತಾ.ಪಂ ಸದಸ್ಯ ಬಸವರಾಜ ಹುಕ್ಕೇರಿ ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷ ತಮ್ಮಣ್ಣಾ ನಾಯಿಕ ವಿದ್ಯಾರ್ಥಿಗಳಿಗೆ ಸೈಕಲ್ ಮತ್ತು ಸಮವಸ್ತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ರಾಮನಾಯಿಕ ನಾಯ್ಕಿ , ಅವ್ವಣಾ ಡಬ್ಬನವರ , ಬಸವರಾಜ ಕಾಡಾಪುರ , ನಿಜಾಮ ನಧಾಪ , ಶಿವಾಜಿ ದೋಡಮನಿ ಶಿಕ್ಷಕರಾದ ಬಿ ಬಿ ದಗಾಟಿ , ಕೆ ಎಮ ಅರಬಾಂವಿ , ಎಲ್ ಎಸ ಪಾಟೀಲ್ , ಪಿ.ಕೆ ಹಾದಿಮನಿ , ಆರ್ ಎ ಗೌಡರ , ಎಸ ಎಸ ಹೂಗಾರ , ಜಿ.ಸಿ ಬಡಿಗೇರ ಸೇರಿದಂತೆ ಗ್ರಾಪಂ ಸದಸ್ಯರು, ಎಸ್‍ಡಿಎಮ್‍ಸಿ ಸದಸ್ಯರು, ಗ್ರಾಮಸ್ಥರು ಇದ್ದರು.

Related posts: