RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಸಂವಿಧಾನ ರಕ್ಷಣೆಗೆ ಎಲ್ಲರೂ ಮುಂದಾಗಬೇಕು : ಚೇತನರಾಜ ಅಭಿಮತ

ಗೋಕಾಕ:ಸಂವಿಧಾನ ರಕ್ಷಣೆಗೆ ಎಲ್ಲರೂ ಮುಂದಾಗಬೇಕು : ಚೇತನರಾಜ ಅಭಿಮತ 

ಸಂವಿಧಾನ ರಕ್ಷಣೆಗೆ ಎಲ್ಲರೂ ಮುಂದಾಗಬೇಕು : ಚೇತನರಾಜ ಅಭಿಮತ
ಗೋಕಾಕ ಡಿ 4 : ಸಂವಿಧಾನ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಮೂಡಲಗಿಯ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಚೇತನರಾಜ ಹೇಳಿದರು

ಬುಧವಾರದಂದು ನಗರದ ನಗರಸಭೆ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬೆಳಗಾವಿಯವರು ಹಮ್ಮಿಕೊಂಡ ಸಂವಿಧಾನ ರಕ್ಷಣೆಗಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ” ಜಾಗೃತಿ ಸಮಾವೇಶ”ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂವಿಧಾನದಿಂದ ನಮ್ಮ ರಕ್ಷಣೆಯಾಗುತ್ತಿದೆ. ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ, ರಾಜಕೀಯ ನ್ಯಾಯ, ಸಮಾನತೆ, ಶಿಕ್ಷಣ, ಸಂಪತ್ತನ್ನು ಅನುಭವಿಸುವ ಹಕ್ಕುಗಳು ದೊರೆಯುತ್ತಿವೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಕಾರ್ಯಗಳನ್ನು ಎಲ್ಲರೂ ನೆನೆಯಬೇಕಾಗಿದೆ. ದೇಶದ ಎಲ್ಲ ವರ್ಗದವರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಸಂವಿಧಾನ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ ವಹಿಸಿದ್ದರು. ಕಾರ್ಯಕ್ರಮವನ್ನು ನಗರಸಭೆ ಮಾಜಿ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತ ಕಲಾವಿದರನ್ನು ಸತ್ಕರಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಲಕ್ಷ್ಮಣ ಕೆಳಗಡೆ,ಜಯಶ್ರೀ ಮಾದರ, ಶ್ರೀಕಾಂತ್ ತಳವಾರ, ಶಿವಾನಂದ ಹೊಸಮನಿ,ವಿಲ್ಸನ್ ಖಾನಟ್ಟಿ,ಸಂತೋಷ ಚಂದನವಾಲೆ, ಸಂಜಯ ತಳವಾರಕರ, ಚಿಕ್ಕೋಡಿ ವಿಭಾಗೀಯ ಸಂಚಾಲಕ ಚೇತನ ಗಣಾಚಾರಿ, ತೌಸೀಪ ದೇಸಾಯಿ, ರಮೇಶ ಈರಗಾರ, ಶಾಬಪ್ಪ ಸಣ್ಣಕಿ, ನಟರಾಜ್ ಮಾವರಕರ, ಮಲ್ಲಪ್ಪ ಅಮ್ಮನಗಿ, ವೀರಭದ್ರ ಮೈಲನ್ನವರ, ಸುರೇಶ ಸಣ್ಣಕ್ಕಿ, ರುಕ್ಕಮ್ಮ ಕುದರಿ, ಮೀರಸಾಬ ಹಿರೆಕೋಡಿ, ಸರತಾಜ್ ಮಿರ್ಜಾನಾಯಿಕ, ಮಹಮ್ಮದಶರೀಫ ಮುಧೋಳ, , ಆರೀಫ ಅರಳಿಮಟ್ಟಿ, ಶಾನೂರ ಶಿರಹಟ್ಟಿ, ಭೀಮಶಿ ಹರಿಜನ, ಸೌರಭ ಕಾಂಬಳೆ ಉಪಸ್ಥಿತರಿದ್ದರು.

Related posts: