RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಶೇರುದಾರರಿಗೆ ಡಿವಿಡೆಂಡ್ ನೀಡುವ ಮೂಲಕ ರೈತ ವರ್ಗದವರಿಗೆ ಗೋಕಾಕ ಪಿಎಲ್ಬಡಿ ಬ್ಯಾಂಕು ದೀಪಾವಳಿ ಹಬ್ಬದ ಕೊಡುಗೆ ನೀಡಿದೆ : ಶಾಸಕ ಬಾಲಚಂದ್ರ

ಗೋಕಾಕ:ಶೇರುದಾರರಿಗೆ ಡಿವಿಡೆಂಡ್ ನೀಡುವ ಮೂಲಕ ರೈತ ವರ್ಗದವರಿಗೆ ಗೋಕಾಕ ಪಿಎಲ್ಬಡಿ ಬ್ಯಾಂಕು ದೀಪಾವಳಿ ಹಬ್ಬದ ಕೊಡುಗೆ ನೀಡಿದೆ : ಶಾಸಕ ಬಾಲಚಂದ್ರ 

ಶೇರುದಾರರಿಗೆ ಡಿವಿಡೆಂಡ್ ನೀಡುವ ಮೂಲಕ ರೈತ ವರ್ಗದವರಿಗೆ ಗೋಕಾಕ ಪಿಎಲ್ಬಡಿ ಬ್ಯಾಂಕು ದೀಪಾವಳಿ ಹಬ್ಬದ ಕೊಡುಗೆ ನೀಡಿದೆ : ಶಾಸಕ ಬಾಲಚಂದ್ರ

ಗೋಕಾಕ ಅ 29 : ಜಿಲ್ಲೆಯ ಇತಿಹಾಸದಲ್ಲಿಯೇ ಪಿಎಲ್‍ಡಿ ಬ್ಯಾಂಕ್ ತನ್ನ ಶೇರುದಾರರಿಗೆ ಡಿವಿಡೆಂಡ್ ನೀಡುವ ಮೂಲಕ ರೈತ ವರ್ಗದವರಿಗೆ ಗೋಕಾಕ ಪಿಎಲ್ಬಡಿ ಬ್ಯಾಂಕು ದೀಪಾವಳಿ ಹಬ್ಬದ ಕೊಡುಗೆ ನೀಡಿದೆ ಎಂದು ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಮಂಗಳವಾರದಂದು ಇಲ್ಲಿಯ ಎಪಿಎಂಸಿ ರಸ್ತೆಯಲ್ಲಿರುವ ದಿ. ಗೋಕಾಕ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿ.ಎಲ್.ಡಿ) ನಿಂದ ಪ್ರಸ್ತುತ ಸಾಲಿನ ಲಾಭಾಂಶದಲ್ಲಿ ರೈತ ಶೇಅರುದಾರರಿಗೆ ಶೇ. 10 ರಷ್ಟು ಡೆವಿಡೆಂಡ್ ವಿತರಿಸಿ ಮಾತನಾಡಿದ ಅವರು, ತನ್ನ ಲಾಭಾಂಶದಲ್ಲಿ ರೈತರಿಗೂ ಸಹ ನೀಡುವ ಮೂಲಕ ರೈತಸ್ನೇಹಿಯಾಗಿ ಪಿ.ಎಲ್.ಡಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
1961 ರಲ್ಲಿ ದಿ. ಎ.ಆರ್. ಪಂಚಗಾಂವಿಯವರ ದೂರದೃಷ್ಟಿಯಿಂದ ರೈತ ವರ್ಗದ ಹಿತಕ್ಕಾಗಿ ಆರಂಭವಾಗಿರುವ ನಮ್ಮ ತಾಲ್ಲೂಕಿನ ಪಿಎಲ್ಡಿ ಬ್ಯಾಂಕ್ 57 ವರ್ಷವನ್ನು ಪೂರೈಸಿದೆ. ಸಮಸ್ತ ರೈತ ವರ್ಗದವರ ಸಂಜೀವಿನಿಯಾಗಿ ಕೆಲಸ ಮಾಡುತ್ತಿರುವ ಈ ಬ್ಯಾಂಕ್ ಈ ವರ್ಷದ ಲಾಭಾಂಶವನ್ನು ವಿತರಿಸುತ್ತಿರುವುದು ಹೆಮ್ಮೆಯಾಗಿದೆ. ರೈತರ ಸಹಕಾರದಿಂದ ಬ್ಯಾಂಕು ಉತ್ತಮ ಸಾಧನೆ ಮಾಡುತ್ತಿದೆ. ರಾಜ್ಯದಲ್ಲಿಯೇ ಈ ಬ್ಯಾಂಕ್ ದ್ವಿತೀಯ ಸ್ಥಾನ ಪಡೆದಿರುವುದು ಸಹಕಾರಿ ರಂಗದ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ. ರೈತರು ಸಹ ಈ ಬ್ಯಾಂಕಿನಿಂದ ಪಡೆದುಕೊಂಡ ಸಾಲವನ್ನು ನಿಗದಿತ ಅವಧಿಯೊಳಗೆ ಪಾವತಿ ಮಾಡುತ್ತಿರುವುದು ಸಹ ಒಳ್ಳೆಯ ಬೆಳವಣಿಗೆಯಾಗಿದೆ. ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಕೂಡಿಕೊಂಡು ಪರಸ್ಪರ ಸಹಕಾರ ಮನೋಭಾವನೆಯಿಂದ ಕರ್ತವ್ಯ ನಿರ್ವಹಿಸುತ್ತಿರುವದರಿಂದ ಪ್ರಸ್ತುತ ಸಾಲಿಗೆ 36.90 ಲಕ್ಷ ರೂ ಲಾಭ ಗಳಿಸಿದೆ. ಇದರಲ್ಲಿ ಶೇ. 10 ರಷ್ಟು ಲಾಭಾಂಶವನ್ನು ಸದಸ್ಯರಿಗೆ ವಿತರಿಸಿದೆ. ಸುಮಾರು 20 ಲಕ್ಷ ರೂ ಗಳನ್ನು ಪಿ.ಎಲ್.ಡಿ ಬ್ಯಾಂಕಿನಿಂದ ಈಗಾಗಲೇ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ರೈತ ಸಮೂಹದವರಿಗೆ 10ಕೋಟಿ. ಸಾಲ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ 8 ಕೋಟಿ ರೂ. ಗಳಷ್ಟು ಸಾಲವನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿರುವ ಅವರು, ಪ್ರತಿ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ಲಾಭ ಗಳಿಸಬೇಕು. ಈ ಮೂಲಕ ರೈತರಿಗೂ ಇದರಿಂದ ಆರ್ಥಿಕವಾಗಿ ಮುಂದೆ ಬರಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಅಪ್ಪಯ್ಯಪ್ಪ ಬಡನಿಂಗಗೋಳ, ಉಪಾಧ್ಯಕ್ಷ ರಾಜು ಬೈರುಗೋಳ, ಮುಖಂಡ ರಾಜೇಂದ್ರ ಸಣ್ಣಕ್ಕಿ, ನಿರ್ದೇಶಕರಾದ ಶಿವಮೂರ್ತಿ ಹುಕ್ಕೇರಿ, ಬಸವಂತಪ್ಪ ಹೊಸೂರ, ಹಣಮಂತ ಅಮ್ಮಿನಭಾವಿ, ಲಗಮನ್ನ ಬೀರನಗಡ್ಡಿ, ಬಸವರಾಜ ಬಡಗನ್ನವರ, ಪ್ರಕಾಶ ತೋಳಿನವರ, ಧರೆಪ್ಪ ಮುಧೋಳ, ಫಕೀರಪ್ಪ ಪೂಜೇರಿ, ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಸಂಗಮೇಶ, ಗೋಕಾಕ ಶಾಖೆಯ ವ್ಯವಸ್ಥಾಪಕ ಸಂದೀಪ ಪತ್ರಾವಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: