RNI NO. KARKAN/2006/27779|Saturday, February 14, 2026
You are here: Home » breaking news » ಬೆಳಗಾವಿ:ಬ್ಲ್ಯಾಕ್ ಮೇಲ್ ಮಾಡುತ್ತಿದ ನಕಲಿ ಪತ್ರಕರ್ತರ ಬಂಧನ

ಬೆಳಗಾವಿ:ಬ್ಲ್ಯಾಕ್ ಮೇಲ್ ಮಾಡುತ್ತಿದ ನಕಲಿ ಪತ್ರಕರ್ತರ ಬಂಧನ 

ಬ್ಲ್ಯಾಕ್ ಮೇಲ್ ಮಾಡುತ್ತಿದ ನಕಲಿ ಪತ್ರಕರ್ತರ ಬಂಧನ

ಬೆಳಗಾವಿ ಅ 19: ಕೌಟುಂಬಿಕ ಕಲಹದ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರು ಸಹ ಆರೋಪಿಗಳಿಗೆ ಬ್ಲಾಕ್ ಮೇಲ್ ಮಾಡುತ್ತಿದ ಇಬ್ಬರು ನಕಲಿ ಪತ್ರಕರ್ತರನನ್ನು ಪೊಲೀಸರು ಬಂಧಿಸಿದ್ದಾರೆ

ಸಂಕೇಶ್ವರದ ವಿನಾಯಕ್ ಬೋಸ್ಲೆ ಮತ್ತು ಚಿಕ್ಕೋಡಿಯ ಕುಮಾರ್ ಪಾಟೀಲ್ ಬಂಧಿತ ನಕಲಿ ಪತ್ರಕರ್ತರು. ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಾಪ್ತಿಯ ಅಂಕಲಗುಡಿಕೇತರ ಗ್ರಾಮದ ಮಹಿಳೆಯೊಬ್ಬರು ತನ್ನ ಗಂಡ ಮತ್ತು ಮೈದುನನ ವಿರುದ್ಧ ಕೌಟುಂಬಿಕ ಪ್ರಕರಣ ಸಂಬಂಧ ಕೇಸ್ ದಾಖಲು ಮಾಡಿದ್ದರು. ಇದನ್ನೆ ಬಂಡವಾಳ ಮಾಡಿಕೊಂಡ ಆರೋಪಿಗಳಾದ ಸಂಕೇಶ್ವರದ ವಿನಾಯಕ್ ಬೋಸ್ಲೆ ಮತ್ತು ಚಿಕ್ಕೋಡಿಯ ಕುಮಾರ್ ಪಾಟೀಲ್ ಎಂಬ ಖದೀಮರು ಈ ಮಹಿಳೆಯ ಮೈದುನ ಭೀಮಗೌಡಾ ಭೂಷಿಗೆ 30ಸಾವಿರ ಹಣ ನೀಡು ಇಲ್ಲದಿದ್ದರೆ ನಿನ್ನ ಸುದ್ದಿಯನ್ನು ಪ್ರಸಾರ ಮಾಡುತ್ತೇವೆ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಹಣ ನೀಡದಿದ್ದರೆ ಪಿ.ಎಸ್.ಐ ಸಾಹೇಬಗೆ ಹೇಳಿ ನಿನ್ನ ಮೇಲೆ ರೇಪ್ ಕೇಸ್ ದಾಖಲು ಮಾಡಲಾಗುತ್ತೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ ಎನ್ನಲಾಗಿದೆ.

ಅಲ್ಲದೆ ರಾಜ್ಯದ ಅನೇಕ ಖಾಸಗಿ ವಾಹಿನಿಗಳ ಹೆಸರು ಹೇಳಿ ಹಣ ಕೀಳಲು ಯತ್ನಿಸಿದ್ದಾರೆ. ನಂತರ ಆರೋಪಿ ಭೀಮಗೌಡಾ ಭೂಷಿಗೆ ಇವರು ಪತ್ರಕರ್ತರಲ್ಲ ಎಂದು ಗೊತ್ತಾಗಿದೆ. ಕೂಡಲೇ ಭೂಷಿ ಈ ಇಬ್ಬರು ಖದೀಮರ ವಿರುದ್ಧ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿ‌ನ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ. ಆತನ ಬಲೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ

Related posts: