ಗೋಕಾಕ: ವೈಯಕ್ತಿಕ ಸಂಬಂಧಗಳನ್ನು ಬದಿಗೊತ್ತಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ : ವಸತಿ ಸಚಿವ ಜಮೀರ ಅಹ್ಮದ್ ಖಾನ
ವೈಯಕ್ತಿಕ ಸಂಬಂಧಗಳನ್ನು ಬದಿಗೊತ್ತಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ : ವಸತಿ ಸಚಿವ ಜಮೀರ ಅಹ್ಮದ್ ಖಾನ
ಗೋಕಾಕ ಎ 27 : ವೈಯಕ್ತಿಕ ಸಂಬಂಧಗಳನ್ನು ಬದಿಗೊತ್ತಿ ಮುಸ್ಲಿಂ ಬಾಂಧವರು ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ವಸತಿ ಮತ್ತು ವಕ್ಪ್ ಸಚಿವ ಬಿ.ಝಡ್. ಜಮೀರ ಅಹ್ಮದ್ ಖಾನ ಹೇಳಿದರು.
ಶನಿವಾರದಂದು ನಗರದ ಕೆಜಿಎನ್ ಸಭಾಂಗಣದಲ್ಲಿ ಬೆಳಗಾವಿ ಲೋಕಸಭಾ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಪರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಚುನಾವಣೆ ಬಂದಾಗ ಅಷ್ಟೇ ಅಲ್ಲ, ನಿರಂತರ ಜನರ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡು ಜನರಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವ ಕಾರ್ಯಮಾಡುತ್ತಾ ಬಂದಿದೆ. ಬಿಜೆಪಿ ಪಕ್ಷಕ್ಕೆ ಹಿಂದೂ, ಮುಸ್ಲಿಂ ವಿಚಾರ ಬಿಟ್ಟು ಬೇರೆ ಯಾವ ವಿಚಾರಗಳು ಇಲ್ಲಾ , ಕಾಂಗ್ರೆಸ್ ಪಕ್ಷ ಚುನಾವಣೆ ಬಂದಾಗ ತಾವು ಮಾಡುವ ಕಾರ್ಯಗಳನ್ನು ಹೇಳಿ ಮತ ಕೇಳುತ್ತಾ ಬಂದಿದೆ ಮತ್ತು ಸರ್ಕಾರ ಬಂದ ನಂತರ ಅದನ್ನು ಅನುಷ್ಠಾನ ಗೊಳಿಸಿದೆ. ಜಾತಿಯತೆ ಮಾಡುವುದನ್ನು ಇಸ್ಲಾಂ ಧರ್ಮ ಕಲಿಸಿಲ್ಲ, ಎಲ್ಲರೂ ಒಂದಾಗಿ ಬಾಳುವುದನ್ನು ಹೇಳಿಕೊಟ್ಟಿದೆ. ಸ್ವಾತಂತ್ರ್ಯ ತರುವಲ್ಲಿ ಮುಸ್ಲಿಂ ನಾಯಕರ ಪಾತ್ರ ಹೆಚ್ಚಾಗಿದ್ದು, ಮುಸ್ಮಾನರು ಈ ದೇಶ ಅವಿಭಾಜ್ಯ ಅಂಗ ಎಂದ ಅವರು ಮುಸ್ಮಿಮರು ಕರ್ನಾಟಕ ಅಷ್ಟೇ ಅಲ್ಲ ದೇಶದ್ಯಾಂತ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದು , ಈ ಬಾರಿ ಕಾಂಗ್ರೆಸ್ ಪಕ್ಷದ ಗೆಲ್ಲುವ ನಿಶ್ಚಿತ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ರಾಜ್ಯದಲ್ಲಿ ಗ್ಯಾರಂಟಿ ಜಾರಿ ಮಾಡಿರುವ ಹಾಗೆ ಕೇಂದ್ರದಲ್ಲಿಯೂ ಸಹ ಜಾರಿ ಮಾಡುವ ಯೋಜನೆ ಹಮ್ಮಿಕೊಂಡು ಪ್ರಣಾಳಿಕೆಯನ್ನು ಹೊರಡಿಸಿದ್ದು, ಅಧಿಕಾರಕ್ಕೆ ಬಂದ ತಕ್ಷಣ ಅವುಗಳನ್ನು ಅನುಷ್ಠಾನ ಗೊಳಿಸಲಾಗುವುದು. ಲೋಕಸಭಾ ಚುನಾವಣೆಯಲ್ಲಿ ಮತದಾನ ಕಡಿಮೆಯಾಗುತ್ತಿದ್ಜು, ಅದನ್ನು ಗಮನಿಸಿ ಎಲ್ಲಾ ಮುಸ್ಲಿಂ ಬಾಂಧವರು ನೂರಕ್ಕೆ ನೂರರಷ್ಟು ಮತದಾನ ಮಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಬಡವರನ್ನು ಉದ್ದಾರ ಮಾಡುವ ಮನಸ್ಸು ಇಲ್ಲಾ ಆದರೆ ಕಾಂಗ್ರೆಸ್ ಪಕ್ಷ ಯಾವಗ ಅಧಿಕಾರಕ್ಕೆ ಬಂದಿದೆ ಬಡವರ ಪರವಾಗಿ ಹಲವಾರು ಕಾರ್ಯಗಳನ್ನು ಮಾಡಿ ಬಡವರ ಬೆನ್ನೆಲುಬಾಗಿ ನಿಂತಿದ್ದು, ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಬೆಂಬಲಿಸಿ ದೇಶದ ಬಡವರ ಸೇವೆ ಮಾಡಲು ಅವಕಾಶ ನೀಡಬೇಕಲ್ಲದೆ ಬೆಳಗಾವಿ ಮತ್ತು ಚಿಕ್ಕೋಡಿಯ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದ ಅವರು ಭಾವನಾತ್ಮಕವಾಗಿ ಭಾಷಣ ಮಾಡುವ ಭರದಲ್ಲಿ ಡೈಸನ್ನು ಕುಟ್ಟಿ ಗಾಜು ಒಡೆದು ಇದು ಪಠಾಣನ ಧೇಹ ಇದಕ್ಕೆ ಏನು ಆಗುವುದಿಲ್ಲ ಎಂದು ಹೇಳಿದಾಗ ಸಭೆಯಲ್ಲಿ ಸೇರಿದ್ದ ಸಾವಿರಾರು ಜನರು ಜೋರಾಗಿ ಘೋಷಣೆಯನ್ನು ಕೂಗಿ ಜಮೀರ ಅಹ್ಮದ್ ಖಾನ ಭಾಷಣವನ್ನು ಬೆಂಬಲಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ , ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಡಾ.ಮಹಾಂತೇಶ ಕಡಾಡಿ, ಜಾಕೀರ ನಧಾಫ, ಸಿದ್ದಲಿಂಗ ದಳವಾಯಿ, ಚಂದ್ರಶೇಖರ್ ಕೊಣ್ಣೂರ, ನಜೀರ ಶೇಖ್, ಹಾಜಿ ಕುತಬುದ್ದೀನ ಬಸ್ಸಾಪೂರಿ, ಮೌಲಾನ ಬಶೀರ ಉಲ್ ಹಕ್ ಕಾಶಮಿ, ಇಲಾಯಿ ಖೈರದಿ, ಜಾಕೀರ ಕುಡಚಿಕರ, ದಸ್ತಗಿರಿ ಪೈಲವಾನ, ಕೆಪಿಸಿಸಿ ಸದಸ್ಯ ಜಬ್ಬಾರಖಾನ , ಜನಾಬ ಹಾಜಿ ಶರಪೋದ್ದೀನ ನರೋ ಮಂಜುನಾಥ್ ಬಂಡಾರಿ, ಜಗ್ಗಣ್ಣಾ ಬಿ.ಕೆ, ಮನ್ನಸೂರ ಖಾನ, ಲಕ್ಕಣ ಸಂವಸುದ್ದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.