ಗೋಕಾಕ:ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹೋರಾಟ ಮಾಡಿದ ಧೀಮಂತ ನಾಯಕ ಡಾ.ಬಾಬು ಜಗಜಿವನರಾವ : ವ್ಹಿ.ಬಿ.ಕನಿಲದಾರ

ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹೋರಾಟ ಮಾಡಿದ ಧೀಮಂತ ನಾಯಕ ಡಾ.ಬಾಬು ಜಗಜಿವನರಾವ : ವ್ಹಿ.ಬಿ.ಕನಿಲದಾರ
ಗೋಕಾಕ ಏ 5 : ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹೋರಾಟ ಮಾಡಿದ ಧೀಮಂತ ನಾಯಕ ಡಾ.ಬಾಬು ಜಗಜಿವನರಾವ ಎಂದು ಇಲ್ಲಿನ ಎಸ್.ಎಲ್ ಜೆ ಪಿಯು ಕಾಲೇಜಿನ ಉಪನ್ಯಾಸಕ ವ್ಹಿ.ಬಿ.ಕನಿಲದಾರ ಹೇಳಿದರು.
ಶುಕ್ರವಾರವಾದಂದು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾ.ಪಂ, ನಗರಸಭೆ ಹಾಗೂ ತಾಲೂಕಿನ ಸ್ಥಳೀಯ ಸಂಸ್ಥೆಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಡಾ.ಜಗಜಿವನರಾವ ರವರ 117ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಡಾ.ಬಾಬು ಜಗಜಿವನರಾವ ಅವರು 50 ವರ್ಷಗಳ ಕಾಲ ನಿರಂತರ ಸಂಸತ್ ಪಟುಗಳಾಗಿ ಸಚಿವರಾಗಿ , ಉಪ ಪ್ರಧಾನಿಯಾಗಿ ದಕ್ಷ ಆಡಳಿತ ನೀಡಿದ್ದರು. ಇವರು ಕೃಷಿ ಸಚಿವರಾಗಿದ್ದಾಗ ದೇಶದ ಆಹಾರ ಕೋರತೆಗೆ ಸ್ವಂದಿಸಿ ಹಸಿರುಕ್ರಾಂತಿಯ ಹರಿಕಾರರಾದರು ಅವರ ಆದರ್ಶಗಳನ್ನು ಆಚರಣೆಗೆ ತರುವುದರೊಂದಿಗೆ ಬಲಿಷ್ಠ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.
ಕಾರ್ಯಕ್ರಮವನ್ನು ತಹಶೀಲ್ದಾರ್ ಡಾ.ಮೋಹನ್ ಭಸ್ಮೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜಾಹೀರ ಉಲ್ಲ ಹಸನ , ಪೌರಾಯುಕ್ತ ರಮೇಶ್ ಜಾಧವ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ್ ಮಲ್ಲಬನ್ನವರ, ಬಿಇಒ ಜಿ ಬಿ.ಬಳಗಾರ, ಸಿಪಿಐ ಆರ್.ಎಸ್.ಜಾನರ, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು , ಸಂಘಟನೆಗಳ ಮುಖಂಡರು ಸಮುದಾಯ ಬಾಂಧವರು ಉಪಸ್ಥಿತರಿದ್ದರು.