ಗೋಕಾಕ:ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ :ಪ್ರೋ ಡಾ.ಮಂಗೇಶ ಜಾಧವ

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ :ಪ್ರೋ ಡಾ.ಮಂಗೇಶ ಜಾಧವ
ಗೋಕಾಕ ಫೆ 28 : ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ವಿಜ್ಞಾನಿಗಳಾಗಿ ದೇಶಕ್ಕೆ ಕೊಡುಗೆ ನೀಡುವಂತೆ ಇಲ್ಲಿಯ ಜೆಎಸ್‍ಎಸ್ ಪದವಿ ಮಹಾವಿದ್ಯಾಲಯದ ಪ್ರೋ ಡಾ.ಮಂಗೇಶ ಜಾಧವ ಹೇಳಿದರು.
ಅವರು ಬುಧವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿಜ್ಞಾನಿ ಡಾ. ಸಿ ವಿ ರಾಮನ ಅವರು ಸಂಶೋಧಿಸಿದ ರಾಮನ್ ಎಫೇಕ್ಟ್‍ಗೆ ನೋಬೆಲ್ ಪಾರಿತೋಷಕ ದೊರೆತ ಹಿನ್ನಲೆಯಲ್ಲಿ ಈ ದಿನಾಚರಣೆ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ಅವರ ಸಂಶೋಧನೆ ಅಧ್ಯಯನದಿಂದ ಪ್ರಭಾವಿತರಾಗಿ ಅವರಂತೆ ವಿಜ್ಞಾನಿಗಳಾಗಿ ದೇಶದ ಕೀರ್ತಿಯನ್ನು ಹೆಚ್ಚಿಸುವಂತೆ ಕರೆ ನೀಡಿದರು.
ವೇದಿಕೆಯ ಮೇಲೆ ಪ್ರಾಚಾರ್ಯರಾದ ಐ ಎಸ್ ಪವಾರ, ಅರುಣ ಪೂಜೆರ, ಉಪನ್ಯಾಸಕ ಎಮ್ ಬಿ ಹೂಗಾರ, ವಿದ್ಯಾರ್ಥಿ ಪ್ರತಿನಿಧಿಗಳಾದ ಅಲ್ಲಪ್ಪ ಬಸಿಡೋನಿ, ರೇಣುಕಾ ಅಜ್ಜನಕಟ್ಟಿ ಇದ್ದರು.