RNI NO. KARKAN/2006/27779|Saturday, August 2, 2025
You are here: Home » breaking news » ಯರಗಟ್ಟಿ:ಪ್ರಸೂತಿ ತಜ್ಞೆ ಡಾ. ವೀಣಾ ಇಟ್ನಾಳಮಠ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ಯರಗಟ್ಟಿ:ಪ್ರಸೂತಿ ತಜ್ಞೆ ಡಾ. ವೀಣಾ ಇಟ್ನಾಳಮಠ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ 

ಪ್ರಸೂತಿ ತಜ್ಞೆ ಡಾ. ವೀಣಾ ಇಟ್ನಾಳಮಠ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ಯರಗಟ್ಟಿ ಡಿ 11 : ಗರ್ಭಿಣಿ ಮಹಿಳೆಯೋರ್ವಳ ಸಿಜರಿನ (ಶಸ್ತ್ರಚಿಕಿತ್ಸೆ) ಮಾಡುವ ಸಂದರ್ಭದಲ್ಲಿ ಮೋಪ್ (ಅರಳಿ ಬಟ್ಟೆ)ಯನ್ನು ಹೊಟ್ಟೆಯಲ್ಲಿ ಬಿಟ್ಟು ರೋಗಿಯ ಪ್ರಾಣಕ್ಕೆ ಕಂಟಕವಾಗಿದ್ದಾರೆ ಎಂದು ಆರೋಪಿಸಿ ಶನಿವಾರದಂದು ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸೂತಿ ತಜ್ಞೆ ಡಾ|| ವೀಣಾ ಇಟ್ನಾಳಮಠ ಇವರ ಮೇಲೆ ಕಾನೂನು ಕ್ರಮ ಜರುಗಿಸುವ ಒತ್ತಾಯಿಸಿ ಗೋಕಾಕ ಹಾಗೂ ಬಸರಗಿ ಗ್ರಾಮಸ್ಥರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.
ನಂತರ ಅಲ್ಲಿಂದ ಪಾದಯಾತ್ರೆ ಮೂಲಕ ತಹಶೀಲದಾರ ಕಚೇರಿಗೆ ತೆರಳಿ ತಹಶೀಲದಾರ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಪ್ರತ್ಯೆಕವಾಗಿ ಮನವಿ
ಸಲ್ಲಿಸಿದರು.
ಗೋಕಾಕ ನಗರದ ಶ್ರೀಮತಿ ದ್ಯಾಮವ್ವ ತುಕಾರಾಮ ಗೋಸಬಾಳ ಕಳೆದ ಜುಲೈ 28 ರಂದು ತನ್ನ ತವರಮನೆಯಾದ ಬಸರಗಿ ಗ್ರಾಮದಿಂದ ಹೆರಿಗೆಗಾಗಿ ಇಲ್ಲಿಯ ಆಸ್ಪತ್ರೆಗೆ ದಾಖಲಾಗಿದ್ದರು. ಗರ್ಭಿಣಿ ಮಹಿಳೆಯ ಹೆರಿಗೆಯನ್ನು ಮಾಡಿಸಿಕೊಳ್ಳುಲು ಡಾ. ವೀಣಾ ಇಟ್ನಾಳಮಠ ಅವರು ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದಾರೆ. ಮಹಿಳೆಯ ಹೆರಿಗೆಯಲ್ಲಿ ಮಹಿಳೆಗೆ ಗಂಡು ಮಗುವಿನ ಜನನವಾಗಿದೆ. ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಡಾ. ವೀಣಾ ಅವರು ಹೊಟ್ಟೆಯಲ್ಲಿ ಶಸ್ತ್ರಚಿಕಿತ್ಸೆಗೆ ಬಳಸುವ ಸಾಧನವನ್ನು ಅಂದರೆ (ಮೋಪ) ಅರಳೆಯ ಬಟ್ಟೆಯನ್ನು ಹೊಟ್ಟೆಯಲ್ಲಿ ಬಿಟ್ಟು ಮೇಲೆ ಹೊಲಿಗೆ ಹಾಕಿದ್ದಾರೆ ಎಂದು ರೋಗಿಯ ಪರವಾಗಿ ಬಂದಿದ್ದ ಪ್ರತಿಭಟನೆ ನಿರತ ಸಂಬಂಧಿಕರ ಆರೋಪವಾಗಿದೆ.
ಮಹಿಳೆಯ ಆರೋಗ್ಯದಲ್ಲಿ ಏರುಪೇರು ಆದಾಗ ಮಹಿಳೆಯನ್ನು ಇಡಿ ದೇಹವನ್ನು ಸಿಟಿ-ಸ್ಕ್ಯಾನ ಮಾಡಿದಾಗ ವೈದ್ಯರು ಮಾಡಿದ ಎಡವಟ್ಟು ಬೆಳಕಿಗೆ ಬಂದಿದೆ. ಸಿಟಿ-ಸ್ಕ್ಯಾನ ವರದಿಯೊಂದಿಗೆ ಮಹಿಳೆಯು ವೈದ್ಯರನ್ನು ಭೇಟಿಯಾಗಿ ತಮ್ಮ ಆರೋಗ್ಯದಲ್ಲಿ ಆಗುತ್ತಿರುವ ಏರುಪೇರುಗಳು ಬಗ್ಗೆ ಹೇಳಿದರೂ ಕೂಡಾ ತಾನು ಮಾಡಿರುವ ಎಡವಟ್ಟು ಮರೆ ಮಾಚಿ ಈ ವೈದ್ಯಾಧಿಕಾರಿಣಿ ಮತ್ತೆ ಎರಡು ದಿನ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಿ ನಿನಗೇ ಏನು ಆಗುವದಿಲ್ಲ. ಹೆದರಬೇಡ ಎಂದು ಹೇಳಿ ಮಹಿಳೆಯನ್ನು ಮತ್ತೆ ಮನೆಗೆ ಕಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಮಗೆ ನ್ಯಾಯ ಸಿಕ್ಕಿರುವದಿಲ್ಲ ಆದ ಕಾರಣ ಸಾಂಕೇತಿಕವಾಗಿ ಧರಣಿ ಸತ್ಯಾಗೃಹ ನಡೆಸುತ್ತಿದ್ದೇವೆ. ಒಂದು ವೇಳೆ ಒಂದು ವಾರದಲ್ಲಿ ನಮಗೆ ನ್ಯಾಯ ದೊರಕದೇ ಹೋದರೇ ಬರುವ ದಿ. 19 ರಂದು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಧರಣಿ ಸತ್ಯಗ್ರಹ ನಡೆಸಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಯಲ್ಲಪ್ಪ ಗೋಸಬಾಳ, ವಿಠ್ಠಲ ಗೋಸಬಾಳ, ವಿಠ್ಠಲ ಧರೆನ್ನವರ, ರಾಮಸಿದ್ದ ಗಣಾಚಾರಿ, ಬಾಳೇಶ ಗೋಸಬಾಳ, ಶ್ರೀಶೈಲ ಬಬಲಿ, ರಾಮಣ್ಣ ಹಗೆದ, ಗಣಪತಿ ರಂಕನಕೊಪ್ಪ, ಆನಂದ ತಾಶೀಲದಾರ, ಫಕೀರಪ್ಪ ಚಿಪ್ಪಲಕಟ್ಟಿ, ವಿಠ್ಠಲ ತಾಶೀಲದಾರ, ನಿಂಗಪ್ಪ ಭಾಗೋಜಿ, ಯಲವ್ವ ಘಮಾಣಿ, ರತ್ನಾ ಧರೆನ್ನವರ, ಮಹಾದೇವಿ ಗೌಡರ ಸೇರಿದಂತೆ ಅನೇಕರು ಇದ್ದರು.‌

Related posts: