RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ: ನಾಳೆ ಪ್ರತೀಕ್ಷಾ ಕೊಕ್ಕರಿ ವಿರಚಿತ ಹೆಣ್ಣಲ್ಲವೇ ನಮ್ಮನ್ನೆಲ್ಲ ಹಡೆದ ತಾಯಿ ಗ್ರಂಥ ಲೋಕಾರ್ಪಣೆ

ಗೋಕಾಕ: ನಾಳೆ ಪ್ರತೀಕ್ಷಾ ಕೊಕ್ಕರಿ ವಿರಚಿತ ಹೆಣ್ಣಲ್ಲವೇ ನಮ್ಮನ್ನೆಲ್ಲ ಹಡೆದ ತಾಯಿ ಗ್ರಂಥ ಲೋಕಾರ್ಪಣೆ 

ನಾಳೆ ಪ್ರತೀಕ್ಷಾ ಕೊಕ್ಕರಿ ವಿರಚಿತ ಹೆಣ್ಣಲ್ಲವೇ ನಮ್ಮನ್ನೆಲ್ಲ ಹಡೆದ ತಾಯಿ ಗ್ರಂಥ ಲೋಕಾರ್ಪಣೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 10 :

ಇಲ್ಲಿನ ಪ್ರತೀಕ್ಷಾ ಪ್ರಕಾಶ ಹಾಗೂ ಕೆಎಲ್ಇ ಸಂಸ್ಕೃತಿ ಸಂಸ್ಥೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಕುಮಾರಿ ಪ್ರತಿಕ್ಷಾ ಕೊಕ್ಕರಿ ವಿರಚಿತ ಹೆಣ್ಣಲ್ಲವೇ ನಮ್ಮನ್ನೆಲ್ಲ ಹಡೆದ ತಾಯಿ ಗ್ರಂಥ ಲೋಕಾರ್ಪಣೆ ಸಮಾರಂಭ ರವಿವಾರ ದಿನಾಂಕ 11 ರಂದು ಮಧ್ಯಾಹ್ನ 4 ಘಂಟೆಗೆ ನಗರದ ಕೆಎಲ್ಇ ಸಂಸ್ಕೃತಿ ವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.
ಕಾರ್ಮಿಕ ಧುರೀಣ ಅಂಬಿರಾವ ಪಾಟೀಲ ಗ್ರಂಥ ಲೋಕಾರ್ಪಣೆ ಮಾಡುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆಎಲ್ಇ ನಿರ್ದೇಶಕ ಜಯಾನಂದ ಮುನ್ನವಳ್ಳಿ ನೆರವೇರಿಸುವರು. ಕಾರ್ಯಕ್ರಮದ ಅಧ್ಯಕ್ಷೆತೆಯನ್ನು  ಹಿರಿಯ ಸಾಹಿತಿ ಮಹಾಲಿಂಗ ಮಂಗಿ ವಹಿಸುವರು. ಗ್ರಂಥ ಕುರಿತು ಪ್ರೋ.ಜಿ.ವ್ಹಿ ಮಳಗಿ ಮತ್ತು ಪುಷ್ಪಾ ಮುರಗೋಡ ಮಾತನಾಡುವರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಸೇರಿದಂತೆ ಅನೇಕರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಾಹಿತಾಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸುಗೋಳಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

Related posts: