RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ರೌಡಿಗಳು ಬಾಲ್ ಬಿಚ್ಚಿದರೆ ಗುಂಡಾ ಕಾಯ್ದೆ, ಗಡಿಪಾರು : ಸಿಪಿಐ ಗೋಪಾಲ ಖಡಕ್ ಎಚ್ಚರಿಕೆ

ಗೋಕಾಕ:ರೌಡಿಗಳು ಬಾಲ್ ಬಿಚ್ಚಿದರೆ ಗುಂಡಾ ಕಾಯ್ದೆ, ಗಡಿಪಾರು : ಸಿಪಿಐ ಗೋಪಾಲ ಖಡಕ್ ಎಚ್ಚರಿಕೆ 

ರೌಡಿಗಳು ಬಾಲ್ ಬಿಚ್ಚಿದರೆ ಗುಂಡಾ ಕಾಯ್ದೆ, ಗಡಿಪಾರು : ಸಿಪಿಐ ಗೋಪಾಲ ಖಡಕ್ ಎಚ್ಚರಿಕೆ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 19 :

 

 

ರೌಡಿಗಳು ಬಾಲ್ ಬಿಚ್ಚಿದರೆ ಗುಂಡಾ ಕಾಯ್ದೆ, ಗಡಿಪಾರು ಮತ್ತು ಖೋಖಾ ದಂತಹ ಪ್ರಕರಣಗಳನ್ನು ದಾಖಲಿಸಿ ಕಠಿಣ ಕ್ರಮ ಜರುಗಿಸಲಾಗುವದು ಎಂದು ಗೋಕಾಕ ಸಿಪಿಐ ಗೋಪಾಲ ರಾಠೋಡ ಎಚ್ಚರಿಕೆ ನೀಡಿದರು

ಮಂಗಳವಾರದಂದು ನಗರದ ಡಿ.ವಾಯ್.ಎಸ್.ಪಿ ಕಛೇರಿಯಲ್ಲಿ ನಡೆದ ರೌಡಿ ಫರೇಡದಲ್ಲಿ ನಡೆಯಿಸಿ ಅವರು ಮಾತನಾಡಿದರು

ಗೊತ್ತಿದ್ದೋ ಗೊತ್ತಿಲ್ಲದೆ ಹಲವಾರು ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸಿ ಬೆಲ್ ಮೇಲೆ ಬಿಡುಗಡೆಯಾಗಿದ್ದರಿ ಸಮಾಜದಲ್ಲಿ ಸನ್ನಡೆಯಿಂದ ವರ್ತಿಸಬೇಕು ಆಗ ಮಾತ್ರ ನಿಮ್ಮ ಮೇಲಿದ್ದ ಪ್ರಕರಣಗಳನ್ನು ತಗೆದು ಹಾಕಲು ಕ್ರಮ ಕೈಗೋಳ್ಳಲಾಗುವದು. ಯಾರಾದರೂ ಸಾಮಾಜ ಘಾತುಕ ಕೃತ್ಯಗಳಲ್ಲಿ ಭಾಗವಹಿಸುದಾಗಲಿ , ಪ್ರೇರಣೆ ನೀಡುವದಾಗಲ್ಲಿ ಮಾಡಿದರೆ ಕಠಿಣ ಕ್ರಮ ಕೈಗೊಂಡು ಬೆಲ್ ರದ್ದು ಮಾಡಲು ಕ್ರಮ ಕೈಗೋಳ್ಳಲಾಗುವದು.

ಗೋಕಾಕ ನಗರ ಮತ್ತು ತಾಲೂಕಿನಾದ್ಯಂತ ಗ್ಯಾಂಗವಾರ , ಮಟ್ಕಾ , ಬೆಟ್ಟಿಂಗ ಮತ್ತು ಹಫ್ತಾ ವಸೂಲಿದಂತಹ ಕೃತ್ಯಗಳು ಜರುಗುತ್ತಿದ್ದು , ಚೈನ್ ಸನ್ಯಾಚಿಂಗ್ ದಂತಹ ಪ್ರಕರಣಗಳು ಸಹ ನಡೆಯುತ್ತಿವೆ ಹಿಂತಹ ಕೃತ್ಯಗಳಲ್ಲಿ ನಿಮ್ಮ ಗುಂಪಿನವರಿದ್ದರೂ ಸಹ ನಿಮ್ಮ ಮೇಲೆ ನಿರ್ಧಾಕ್ಷಣೀಯ ಕ್ರಮ ಜರುಗಿಸಲಾಗುವದು.

ಕಾನೂನು ಬಾಹೀರವಾಗಿ ಆಯುಧಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಅಂತಹ ರೌಡಿಗಳ ಮೇಲೆ ರೇಡಮಾಡಿ ಆಯುಧಗಳನ್ನು ವಶ ಪಡಿಸಲಾಗುವದು . ಯಾರಾದರೂ ಆಯುಧಗಳನ್ನು ಇಟ್ಟುಕೊಂಡಿದ್ದರೆ ಸ್ವಯಂ ಪ್ರೇರಿತವಾಗಿ ಪೊಲೀಸರ ವಶಕ್ಕೆ ನೀಡಿಬೇಕು ರೇಡ್ ಸಂದರ್ಭದಲ್ಲಿ ಯಾರ ಮೆನೆಯಲ್ಲಿ ಆಯುಧಗಳನ್ನು ಸಿಕ್ಕರೆ ಅಂತಹ ರೌಡಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವದು ಎಂದು ಸಿಪಿಐ ಗೋಪಾಲ ರಾಠೋಡ ಹೇಳಿದರು
ಇದೇ ಸಂಧರ್ಭದಲ್ಲಿ ರೌಡಿ ಫರೇಡಗೆ ಹಾಜರಾಗಿದ್ದ ತಾಲೂಕಿನ ಎಲ್ಲಾ ರೌಡಿಗಳಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣ ಠಾಣೆಯ ಪಿ.ಎಸ್.ಐ ಎನ್.ಆರ್ ಕಿಲಾರಿ , ಅಂಕಲಗಿ ಪಿ.ಎಸ್.ಐ ಪ್ರಕಾಶ ರಾಠೋಡ ಇದ್ದರು

Related posts: