RNI NO. KARKAN/2006/27779|Thursday, March 19, 2026
You are here: Home » breaking news » ಗೋಕಾಕ:ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ನಗರದಲ್ಲಿ ಸಡಗರದಿಂದ ಆಚರಣೆ

ಗೋಕಾಕ:ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ನಗರದಲ್ಲಿ ಸಡಗರದಿಂದ ಆಚರಣೆ 

ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ನಗರದಲ್ಲಿ ಸಡಗರದಿಂದ ಆಚರಣೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 9 :
ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ನಗರದಲ್ಲಿ ಸಡಗರದಿಂದ ಆಚರಿಸಲಾಯಿತು.
ಮೊಹರಂ ಹಬ್ಬದ ಹತ್ತನೇಯ ದಿನವಾದ ಮಂಗಳವಾರದಂದು ಇಲ್ಲಿನ ಹಳೆ ದನಗಳ ಪೇಠೆಯಲ್ಲಿ ಮೊಹರಂ ಪಂಜಾಗಳ ಮುಲಾಕಾತ ನಡೆಯಿತು.ಮುಲಾಕಾತ ನೋಡಲು ಹಿಂದು ಮುಸ್ಲಿಂ ಬಾಂಧವರು ಸೇರುವುದರ ಮೂಲಕ ಭಾವೈಕ್ಯತೆ ಮರೆದರು

ನಗರದ ವಿವಿಧ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಲಾದ ಪಂಜಾ ಗಳು ಮೊಹರಂ ಕಡೆಯ ದಿನದಂದು ಹಳೆ ದನಗಳ ಪೇಠೆಯಲ್ಲಿ ಸೇರಿ ಮುಲಾಕಾತ ಮಾಡಲಾಯಿತು. ಪಂಜಾಗಳ ಮಿಲನ ಆಗುತ್ತಿದ್ದಂತೆಯೇ ಹಸನ್ ಹುಸ್ಸೇನ್ ಕೀ ದೋಸ್ತರೋ ದ್ದೀನ್ ಎಂದು ಜಯಘೋಷ ಭಕ್ತಾದಿಗಳು ಕೂಗಿ ಸಂಭ್ರಮ ಪಟ್ಟರು. ರಾತ್ರಿ 8 ಘಂಟೆಗೆ ನಗರದಲ್ಲಿ ಪ್ರತಿಷ್ಟಾಪನೆ ಮಾಡಲಾಗಿರುವ ತಾಬೂತು (ದೇವರು) ಗಳ ವಿಸರ್ಜನೆ ಕಾರ್ಯಕ್ರಮ ನಡೆಯಿತು

Related posts: