RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೆಚ್ಚಿನ ಪ್ರಗತಿ ಸಾಧಿಸಿ : ಶಾಸಕ ರಮೇಶ

ಗೋಕಾಕ:ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೆಚ್ಚಿನ ಪ್ರಗತಿ ಸಾಧಿಸಿ : ಶಾಸಕ ರಮೇಶ 

ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೆಚ್ಚಿನ ಪ್ರಗತಿ ಸಾಧಿಸಿ : ಶಾಸಕ ರಮೇಶ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 7 :
ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೆಚ್ಚಿನ ಪ್ರಗತಿ ಸಾಧಿಸುವಂತೆ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.ಗುರುವಾರದಂದು ನಗರದ ತಮ್ಮ ಕಾರ್ಯಾಲಯದ ಆವರಣದಲ್ಲಿ ಕೃಷಿ ಇಲಾಖೆಯ ಮುಂಗಾರು ಹಂಗಾಮಿನ ಕೃಷಿ ಅಭಿಯಾನ ಹಾಗೂ ಕೃಷಿ ಸಂಜೀವಿನಿ ವಾಹನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ವೈಜ್ಞಾನಿಕ ಯುಗದಲ್ಲಿ ಯಂತ್ರಗಳ ಅಳವಡಿಕೆಯಿಂದ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯ ರೈತರು ಈ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕೃಷಿ ಇಲಾಖೆ ಹಾಗೂ ಇತರ ಕೃಷಿಗೆ ಸಂಬಂಧಪಟ್ಟ ಇಲಾಖೆಯಿಂದ ರೈತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಸರಕಾರ ರೂಪಿಸಿದ್ದು, ಅವುಗಳ ಮಾಹಿತಿಯನ್ನು ಮನೆ ಮನೆಗೆ ತಲುಪಿಸಲು ಅಧಿಕಾರಿಗಳು ಕಾರ್ಯಪ್ರವೃತ್ತವಾಗಿದ್ದು, ಇದರ ಸದುಪಯೋಗ ಪಡೆಸಿಕೊಳ್ಳವಂತೆ ಕರೆ ನೀಡಿದರು.ಇದೇ ಸಂದರ್ಭದಲ್ಲಿ ರೈತರು ಬೆಳೆದ ಮಾಹಿತಿಯನ್ನು ರೈತರೆ ದಾಖಲಿಸುವಂತಹ ಬೆಳೆ ಸಮಿಕ್ಷೆ ಆಫ್ ಅನ್ನು ಶಾಸಕರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರುಗಳಾದ ಟಿ.ಆರ್.ಕಾಗಲ, ಮಡೆಪ್ಪ ತೋಳಿನವರ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಎಂ.ಎಂ ನಧಾಪ್ , ಎಂ.ಎನ್.ಜನ್ಮಟ್ಟಿ , ಕೃಷಿ ಅಧಿಕಾರಿಗಳಾದ ಎಸ್.ಬಿ.ಕರಗಣ್ಣಿ, ಎಂ.ಐ ಪತ್ತಾರ, ಶ್ರೀಮತಿ ಛಾಯಾ ಪಾಟೀಲ, ವಿನಾಯಕ ತುರಾಯಿದಾರ, ಸುರೇಶ್ ಬಿರಾಣಿ, ಯು.ಪಿ.ಹಿರೇಮಠ , ಮುಖಂಡರಾದ ಲಕ್ಷ್ಮೀಕಾಂತ್ ಎತ್ತಿನಮನಿ, ಭೀಮಶಿ ಭರಮನ್ನವರ ಸೇರಿದಂತೆ ಅನೇಕರು ಇದ್ದರು. ಪೋಟೋ ಜು 7 ಜಿಕೆಕೆ 1 ಗೋಕಾಕ : ಕೃಷಿ ಇಲಾಖೆಯಿಂದ ಆರಂಭಿಸಲಾದ ಕೃಷಿ ಸಂಜೀವಿನಿ ವಾಹನಕ್ಕೆ ಶಾಸಕ ರಮೇಶ ಜಾರಕಿಹೊಳಿ ಅವರು ಚಾಲನೆ ನೀಡುತ್ತಿರುವುದು.

Related posts: