RNI NO. KARKAN/2006/27779|Thursday, April 16, 2026
You are here: Home » breaking news » ಗೋಕಾಕ:ವಿದ್ಯಾರ್ಥಿ ಜೀವನದಿಂದ ಪ್ರಯತ್ನ ಶೀಲರಾಗಿ ತಮ್ಮ ಭವಿಷ್ಯವನ್ನು ಸುರ್ವಣಮಯ ಮಾಡಿಕೊಳ್ಳಿ : ಅರುಣ ಪೂಜೇರಾ

ಗೋಕಾಕ:ವಿದ್ಯಾರ್ಥಿ ಜೀವನದಿಂದ ಪ್ರಯತ್ನ ಶೀಲರಾಗಿ ತಮ್ಮ ಭವಿಷ್ಯವನ್ನು ಸುರ್ವಣಮಯ ಮಾಡಿಕೊಳ್ಳಿ : ಅರುಣ ಪೂಜೇರಾ 

ವಿದ್ಯಾರ್ಥಿ ಜೀವನದಿಂದ ಪ್ರಯತ್ನ ಶೀಲರಾಗಿ ತಮ್ಮ ಭವಿಷ್ಯವನ್ನು ಸುರ್ವಣಮಯ ಮಾಡಿಕೊಳ್ಳಿ : ಅರುಣ ಪೂಜೇರಾ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 11 :

 

ಬಂಗಾರದಂತ ವಿದ್ಯಾರ್ಥಿ ಜೀವನದಿಂದ ಪ್ರಯತ್ನ ಶೀಲರಾಗಿ ತಮ್ಮ ಭವಿಷ್ಯವನ್ನು ಸುರ್ವಣಮಯ ಮಾಡಿಕೊಳ್ಳಿರೆಂದು ಇಲ್ಲಿನ ಎಸ್.ಎಲ್.ಜೆ ಪಿ.ಯು ಕಾಲೇಜಿನ ಪ್ರಾಚಾರ್ಯ ಅರುಣ ಪೂಜೇರಾ ಹೇಳಿದರು.

ಶುಕ್ರವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಗಳ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಅಭಿರುಚಿ ಇರುವ ಕ್ಷೇತ್ರದ ಆಯ್ಕೆಯೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿ ಪ್ರತಿಭಾವಂತರಾಗಿ, ಪ್ರತಿಭಾನ್ವಿತರಿಗೆ ಹೆಚ್ಚಿನ ಕಲಿಕೆಯ ಅವಕಾಶಗಳಿದ್ದು, ಆತ್ಮ ವಿಶ್ವಾಸದಿಂದ ಅಧ್ಯಯನಶೀಲರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಹಾರೈಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರತಿಬಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ವೇದಿಕೆಯ ಮೇಲೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ, ಮುಖ್ಯೋಪಾಧ್ಯಾಯರುಗಳಾದ ಬಿ.ಕೆ ಕುಲಕರ್ಣಿ, ಎಚ್ ಬಿ.ಪಾಗನಿಸ, ಪಿ.ವಿ.ಚಚಡಿ ಇದ್ದರು.
ವಿದ್ಯಾರ್ಥಿನಿಯರಾದ ಎಸ್.ಎಂ ಶೈಲಜಾ ಸ್ವಾಗತಿಸಿದರು, ಅರ್ಸಿತಾ ಜೋಗನ್ನವರ ನಿರೂಪಿಸಿದರು, ಜೈತ್ರಾ ಮನೋಚಾರಿ ವಂದಿಸಿದರು.

Related posts: