RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ :ತಂದೆ-ತಾಯಿಗಳು ಮಕ್ಕಳನ್ನು ದೈಹಿಕವಾಗಿ ಬೆಳೆಸುತ್ತಾರೆ. ಅವರ ಜ್ಞಾನ ಹೆಚ್ಚಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ : ಬಿಇಒ ಜಿ.ಬಿ.ಬಳಗಾರ

ಗೋಕಾಕ :ತಂದೆ-ತಾಯಿಗಳು ಮಕ್ಕಳನ್ನು ದೈಹಿಕವಾಗಿ ಬೆಳೆಸುತ್ತಾರೆ. ಅವರ ಜ್ಞಾನ ಹೆಚ್ಚಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ : ಬಿಇಒ ಜಿ.ಬಿ.ಬಳಗಾರ 

ತಂದೆ-ತಾಯಿಗಳು ಮಕ್ಕಳನ್ನು ದೈಹಿಕವಾಗಿ ಬೆಳೆಸುತ್ತಾರೆ. ಅವರ ಜ್ಞಾನ ಹೆಚ್ಚಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ : ಬಿಇಒ ಜಿ.ಬಿ.ಬಳಗಾರ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 5 :

ನಿವೃತ್ತ ಶಿಕ್ಷಕರನ್ನು ಸನ್ಮಾನಿಸುತ್ತಿರುವ ಗಣ್ಯರು

 

ತಂದೆ-ತಾಯಿಗಳು ಮಕ್ಕಳನ್ನು ದೈಹಿಕವಾಗಿ ಬೆಳೆಸುತ್ತಾರೆ. ಅವರ ಜ್ಞಾನ ಹೆಚ್ಚಿಸುವ ಕೆಲಸವನ್ನು ಶಿಕ್ಷಕರು ಮಾಡಿ, ಒಳ್ಳೆಯ ಬುನಾದಿ ಹಾಕುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.
ರವಿವಾರದಂದು ಇಲ್ಲಿನ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಬೆಳಗಾವಿ, ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗೋಕಾಕ ಇವುಗಳ ಸಂಯುಕ್ತಾಶಯದಲ್ಲಿ ಹಮ್ಮಿಕೊಂಡ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ 134ನೇ ಹುಟ್ಟು ಹಬ್ಬದ ಸವಿನೆನಪಿನಲ್ಲಿ ಗುರು ಸ್ಮರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಭಾರತೀಯ ಗುರು ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ. ಶಿಕ್ಷಕರು ನಿರಂತರ ವಿದ್ಯಾರ್ಥಿಯಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳಲ್ಲಿ ಸೇವಾ ಮನೋಭಾವ ಹಾಗೂ ನೈತಿಕ ಮೌಲ್ಯವನ್ನು ಬೆಳೆಸಬೇಕು.ಶಿಕ್ಷಕರು ದಿವ್ಯ ಪರಂಪರೆಗೆ ಸೇರಿದವರಾಗಿದ್ದೇವೆ. ಶಿಕ್ಷಕರನ್ನು ಸಮಾಜ ಅತ್ಯಂತ ಗೌರವದಿಂದ ಕಾಣುತ್ತದೆ. ಗೋಕಾಕ ವಲಯದಲ್ಲಿ ಶಿಕ್ಷಕರು ರಚನಾತ್ಮಕ ಕಾರ್ಯಗಳನ್ನು ಮಾಡಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿರುವ ಶಿಕ್ಷಕರ ಪಾತ್ರ ಶ್ಲಾಘನೀಯವಾಗಿದೆ. ಇಂತಹ ರಚನಾತ್ಮಕ ಕಾರ್ಯವನ್ನು ಮಾಡು ಗುರುಗಳಿಗೆ ವಂದನೆ ಸಲ್ಲಿಸಲು ನಿಟ್ಟಿನಲ್ಲಿ ಈ ವರ್ಷದಿಂದ ಗೋಕಾಕ ವಲಯದ ವತಿಯಿಂದ ಥ್ಯಾಂಕ್ಸ್ ಗುರುಜೀ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲರೂ ತಮ್ಮ ತಮ್ಮ ಗುರುಗಳಿಗೆ ಧನ್ಯತಾ ಭಾವ ತಾಳಬೇಕು ಎಂದು ಬಿಇಒ ಜಿ.ಬಿ.ಬಳಗಾರ ಅವರು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ ನ ಸಾಮಾಜಿಕ ಜಾಲತಾಣವನ್ನು ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ ಲೋಕಾರ್ಪಣೆ ಗೋಳಿಸಿದರು. ಇದೇ ಸಂದರ್ಭದಲ್ಲಿ ಗೋಕಾಕ ವಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತವಾದ ಶಿಕ್ಷಕ , ಶಿಕ್ಷಕೀಯನ್ನು ಸತ್ಕರಿಸಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಶಿಕ್ಷಕ ಆರ್.ಎಲ್.ಮಿರ್ಜಿ ನಿರೂಪಿಸಿ,ವಂದಿಸಿದರು.

ವೇದಿಕೆಯಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ತಾ.ಪಂ ಎಡಿ ಸಿದ್ಧಣ ದೇಸಾಯಿ ಉಪಸ್ಥಿತರಿದ್ದರು.

Related posts: