ಘಟಪ್ರಭಾ:ಮಾಸ್ಕ ಇಲ್ಲದೆ ತಿರುಗುತ್ತಿದವರ ಅಂಗಿ ಬಿಚ್ಚಿಸಿ ಮುಖಕ್ಕೆ ಕಟ್ಟಿ ಬುದ್ದಿ ಕಲಿಸಿದ ಘಟಪ್ರಭಾ ಪೊಲೀಸರು
ಮಾಸ್ಕ ಇಲ್ಲದೆ ತಿರುಗುತ್ತಿದವರ ಅಂಗಿ ಬಿಚ್ಚಿಸಿ ಮುಖಕ್ಕೆ ಕಟ್ಟಿ ಬುದ್ದಿ ಕಲಿಸಿದ ಘಟಪ್ರಭಾ ಪೊಲೀಸರು
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜು 21 :
ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದರು ಸಹ ಎಚ್ಚರಗೋಳದ ಜನರಿಗೆ ಘಟಪ್ರಭಾ ಪೊಲೀಸರು ಅಂಗಿ ಬಿಚ್ಚಿಸಿ ಮುಖಕ್ಕೆ ಮಾಸ್ಕ ಮಾಡಿ ಹಾಕಿಸಿ ಸರಿಯಾಗಿ ಬುದ್ದಿ ಕಲಿಸಿದ್ದಾರೆ
ವಾರದ ಲಾಕಡೌನ ಕೊನೆಯ ದಿನವಾದ ಮಂಗಳವಾರದಂದು ಪಟ್ಟಣದ ಪ್ರಮುಖ ಜನನಿಬಿಡು ಪ್ರದೇಶಗಳಲ್ಲಿ ಗಸ್ತು ತಿರುಗಿದ ಘಟಪ್ರಭಾ ಪೊಲೀಸರು ಮುಖಕ್ಕೆ ಮಾಸ್ಕ ಧರಿಸದ ಪುಂಡರಿಗೆ ಸರಿಯಾಗಿ ಬುದ್ದಿ ಕಲಿಸಿ ಸ್ಥಳದಲ್ಲೇ ಅಂಗಿ ಬಿಚ್ಚಿಸಿ ಮುಖಕ್ಕೆ ಕಟ್ಟಿಸಿ ಕಳುಹಿಸಿದ್ದಾರಲ್ಲದೆ ಕೆಲವೊಂದು ಕಡೆಗಳಲ್ಲಿ ತೆರೆದಿದ್ದ ಅಂಗಡಿಗಳನ್ನು ಬಂದ ಮಾಡಿಸಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ .