ಬೆಳಗಾವಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳ ಬಂಧನ
ಬೆಳಗಾವಿ :: ಬೆಳಗಾವಿ ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದ ಏಳು ಜನ ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದ್ದಾರೆ.
ಅಂಜುಬೇಗ್ (32), ಹಫಿಜುಲ್ಲಾ ಇಸ್ಲಾಂ (20), ಹಕೀಬ್ (20), ಅಬ್ದುಲ್ ನಿಹಾರ ಅಲಿ ಗಾಜಿ (60), ಅನ್ವರ್ ಸದ್ದಾರ್ (21), ರೋಹನ್ (21), ಮಹಮ್ಮದ್ ಅಲ್ವಿನ್ ಶೌಫಿವುದ್ದಿನ್ ಬೇಪಾರಿ (26) ಬಂಧಿತರು.
ಮಹಮ್ಮದ್ ಬೇಪಾರಿ ನಕಲಿ ಪಾಸ್‌ಪೋರ್ಟ್ ಬಳಸಿ ದುಬೈಗೆ ಪ್ರಯಾಣ ಬೆಳೆಸಲು ಯತ್ನಿಸುತ್ತಿದ್ದಾಗ ಪುಣೆ ವಿಮಾನ ನಿಲ್ದಾಣದಲ್ಲಿ ಬಂಧನವಾಗಿದ್ದಾನೆ. ಈ ಸಂದರ್ಭದಲ್ಲಿ ಬೇಪಾರಿ ನೀಡಿದ ಮಾಹಿತಿ ಮೇಲೆ ಉಳಿದವರನ್ನ ಬೆಳಗಾವಿಯ ಮಾಳಮಾರುತಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿನ್ನೆಲೆ ಇನ್ನೂ ಹಲವಾರು ಬಾಂಗ್ಲಾದ ಅಕ್ರಮ ವಾಸಿಗಳು ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ
ಕಳೆದ ಕೆಲ ದಿನಗಳ ಹಿಂದೆ ಬೆಳಗಾವಿಗೆ ಆಗಮಿಸಿ ಸಭೆ ನಡೆಸಿದ್ದ ಕೆನರಾ ಸಂಸದ ಅನಂತಕುಮಾರ ಹೆಗಡೆ ಅವರು ಬೆಳಗಾವಿಯಲ್ಲಿ ಬಾಂಗ್ಲಾ ದೇಶೀಯರ ಹಾವಳಿ ಹೆಚ್ಚುತ್ತಿದೆ ತಕ್ಷಣ ಅವರನ್ನು ಹಿಡಿಯಿರಿ ಎನ್ನುವ ಒತ್ತಾಯ ಮಾಡಿದನ್ನು ಇಲ್ಲಿ ಸ್ಮರಿಸಬಹುದು ಇದರ ಇಂಪ್ಯಾಕ್ಟ ಎಂದಂತೆ ಬೆಳಗಾವಿ ಪೋಲೀಸರು ಬೆಳಗಾವಿಯಲ್ಲಿ ಒಟ್ಟು 7 ಜನ ಬಾಂಗ್ಲಾ ದೇಶೀಯರನ್ನು ಹಿಡಿಯುವ ಮೂಲಕ ಬಾಂಗ್ಲಾ ದೇಶೀಯರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ
