RNI NO. KARKAN/2006/27779|Thursday, August 13, 2026
You are here: Home » breaking news » ಗೋಕಾಕ:ಕುಡುಗೋಲಿನಿಂದ ಕೊಚ್ಚಿ ಮಗನನ್ನು ಕೊಂದ ತಂದೆ : ಮೇಲ್ಮಟ್ಟಿ ಗ್ರಾಮದಲ್ಲಿ ಘಟನೆ

ಗೋಕಾಕ:ಕುಡುಗೋಲಿನಿಂದ ಕೊಚ್ಚಿ ಮಗನನ್ನು ಕೊಂದ ತಂದೆ : ಮೇಲ್ಮಟ್ಟಿ ಗ್ರಾಮದಲ್ಲಿ ಘಟನೆ 

ಕುಡುಗೋಲಿನಿಂದ ಕೊಚ್ಚಿ ಮಗನನ್ನು ಕೊಂದ ತಂದೆ : ಮೇಲ್ಮಟ್ಟಿ ಗ್ರಾಮದಲ್ಲಿ ಘಟನೆ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ : 28

 

ದನ-ಕರುಗಳಿಗೆ ಮೇವು ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ಮಗನ ಮೇಲೆ ಸಿಟ್ಟಾದ ತಂದೆ ಕುಡುಗೋಲಿನಿಂದ ಕೊಚ್ಚಿ ಮಗನನ್ನು ಕೊಂದ ಹೃದಯವಿದ್ರಾವಕ ಘಟನೆ ಶನಿವಾರದಂದು ಸಂಜೆ

ಗೋಕಾಕ ತಾಲೂಕಿನ ಮೇಲ್ಮಟ್ಟಿಯಲ್ಲಿ ನಡೆದಿದೆ.

ಗೋಕಾಕ ತಾಲೂಕಿನ ಮೇಲ್ಮಟ್ಟಿಯ ಯಮನಪ್ಪ ಬಾಲಪ್ಪ ಗುತ್ತಿಗೆ (41) ಹತ್ಯೆಗೀಡಾಗಿದ್ದಾರೆ. ಹೊಲದಲ್ಲಿ ಕೆಲಸ ಮಾಡುವಾಗ ಜಾನುವಾರುಗಳಿಗೆ ಮೇವು ಹಾಕುವ ವಿಚಾರದಲ್ಲಿ ತಂದೆ-ಮಗನ ಮಧ್ಯೆ ಗಲಾಟೆ ಆಗಿದ್ದು, ಜಗಳ ವಿಕೋಪಕ್ಕೆ‌ ತಿರುಗಿ ಮಗನನ್ನು ತಂದೆ ಬಾಲಪ್ಪ ಹೊಡೆದು ಕೊಲೆ ಮಾಡಿದ್ದಾರೆ.

ಮಗನಿಗೆ ಕೊಡಲಿಯಿಂದ ಹೊಡೆದಿದ್ದರಿಂದ ಮಗನನ್ನು ಕೂಡಲೇ ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಕರೆ ತರುವಾಗ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಆರೋಪಿ ತಂದೆ ಬಾಲಪ್ಪನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts:

ಖಾನಾಪುರ: ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿ : ಖಾನಾಪುರದಲ್ಲಿ ಜರುಗಿದ ರೈತರ ಸಮಸ್ಯೆಗಳ …

ಗೋಕಾಕ:ಗ್ರಾಮದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ : ಪಿಡಿಒ ಬಿ.ಎಫ್.ದಳವಾಯಿ

ಗೋಕಾಕ:ಶ್ರೀಗಳ ನಡಿಗೆ ಭಕ್ತರ ಮನೆಗಳ ಕಡೆಗೆ ಕಾರ್ಯಕ್ರಮ ಸಮಾಜದಲ್ಲಿ ಕ್ರಾಂತಿಕಾರಿ ಸಂದೇಶ ನೀಡಿದೆ : ಡಾ.ಸಿ.ಕೆ ನಾವಲಗಿ