RNI NO. KARKAN/2006/27779|Saturday, March 21, 2026
You are here: Home » breaking news » ಗೋಕಾಕ:ಶಾಮಿಯಾನ ಸೌಂಡ್ ಮತ್ತು ಡೆಕೋರೇಟರ್ಸ ಮಾಲಿಕರಿಗೆ ಮತ್ತು ಕಾರ್ಮಿಕರಿಗೆ ಆರ್ಥಿಕ ನೆರವಿಗೆ ಸಚಿವರಿಗೆ ಮನವಿ

ಗೋಕಾಕ:ಶಾಮಿಯಾನ ಸೌಂಡ್ ಮತ್ತು ಡೆಕೋರೇಟರ್ಸ ಮಾಲಿಕರಿಗೆ ಮತ್ತು ಕಾರ್ಮಿಕರಿಗೆ ಆರ್ಥಿಕ ನೆರವಿಗೆ ಸಚಿವರಿಗೆ ಮನವಿ 

ಶಾಮಿಯಾನ ಸೌಂಡ್ ಮತ್ತು ಡೆಕೋರೇಟರ್ಸ ಮಾಲಿಕರಿಗೆ ಮತ್ತು ಕಾರ್ಮಿಕರಿಗೆ ಆರ್ಥಿಕ ನೆರವಿಗೆ ಸಚಿವರಿಗೆ ಮನವಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 16 :

 

 

ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ದೇಶದಲ್ಲಿ ಲಾಕಡೌನ್ ಮಾಡಿದ ಹಿನ್ನೆಲೆಯಲ್ಲಿ ಇಲ್ಲಿಯ ಗೋಕಾಕ ತಾಲೂಕಿನ ಶಾಮಿಯಾನ ಸೌಂಡ್ ಮತ್ತು ಡೆಕೋರೇಟರ್ಸ ಮಾಲಿಕರ ಸಂಘದ ಪದಾಧಿಕಾರಿಗಳು ಶಾಮಿಯಾನ ಸೌಂಡ್ ಮತ್ತು ಡೆಕೋರೇಟರ್ಸ ಮಾಲಿಕರಿಗೆ ಮತ್ತು ಕಾರ್ಮಿಕರಿಗೆ ಆರ್ಥಿಕ ನೆರವು ನೀಡಬೇಕೆಂದು ಆಗ್ರಹಿಸಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಶನಿವಾರಂದು ಮನವಿ ಸಲ್ಲಿಸಿದರು.
ಲಾಕಡೌನ್‍ದಿಂದಾಗಿ ಸಭೆ,ಸಮಾರಂಭಗಳು ನಡೆಯದೇ ಇರುವ ಕಾರಣ ಶಾಮಿಯಾನ್ ಮಾಲಿಕರು ಹಾಗೂ ಕಾರ್ಮಿಕರು ಕರ್ನಾಟಕ ರಾಜ್ಯದ ವೃತ್ತಿಪರ ಶಾಮಿಯಾನ ಸೌಂಡ್ ಡೆಕೋರೇಟರ್ಸ್ ಮಾಲಿಕರು ಮತ್ತು ಕಾರ್ಮಿಕರು ಸದ್ಯ ಕೈಯಲ್ಲಿ ಕೆಲಸ ಇಲ್ಲದೇ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸಬೇಕಾಗಿದೆ. ಶಾಮಿಯಾನ್ ಖರೀದಿಸುವ ಸಲುವಾಗಿ ಬ್ಯಾಂಕ್ ಸಹಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಇತರೆ ಮೂಲಗಳಿಂದಸಾಲ ಪಡೆದಿದ್ದು ಅಲ್ಲದೇ ಗೋಡೌನ್ ಬಾಡಿಗೆಯನ್ನು ಕಟ್ಟಲು ಸಹ ಸಾಧ್ಯವಾಗುತ್ತಿಲ್ಲ. ಈ ಉದ್ದಿಮೆಯು ವರ್ಷದಲ್ಲಿ 5ರಿಂದ 6ತಿಂಗಳು ಮಾತ್ರ ನಡೆಯುತ್ತದೆ. ಗೋಕಾಕ ತಾಲೂಕಿನಲ್ಲಿ ಸುಮಾರು ಎರಡು ನೂರು ಜನ ಮಾಲಿಕರಿದ್ದು 1200 ಜನ ಕಾರ್ಮಿಕರಿರುತ್ತಾರೆ. ಆದ್ದರಿಂದ ಘನ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಶಾಮಿಯಾನ ಸೌಂಡ್ ಮತ್ತು ಡೆಕೋರೇಟರ್ಸ ಮಾಲಿಕರ ಸಂಘದ ತಾಲೂಕಾಧ್ಯಕ್ಷ ಬಸವರಾಜ ಹತ್ತರಕಿ,ಉಪಾಧ್ಯಕ್ಷ ಬಸವರಾಜ ಅಂಬನ್ನವರ, ಖಜಾಂಚಿ ವಿಠ್ಠಲ ಸೂರ್ಯವಂಶಿ, ಕಾರ್ಯದರ್ಶಿ ಆನಂದ ಹಟ್ಟಿಗೌಡರ, ಪದಾಧಿಕಾರಿಗಳಾದ ಬಸವರಾಜ ಎಮ್ಮಿ, ಮುಜಮೀಲ ಕುರಬೇಟ, ಜಾವಿದ ಪಟೇಲ, ಗಿರೆಪ್ಪ ಶಿಂಗೋಟಿ,ಶಂಕರ ಬಿಳ್ಳೂರ, ಕರೆಪ್ಪ ನಂದಿ, ರಂಗಪ್ಪ ನಿಂಗನ್ನವರ,ಮಲೀಕ ರಾಜಾಪೂರ, ಮಹೆಬೂಬ ಸೈಯದ, ರಾಜು ಪಣಿಬಂದ, ಶಹಬಾಜ ಖಾಜಿ, ಜನಮಂತಪ್ಪ ದಳವಾಯಿ ಸೇರಿದಂತೆ ಇತರರು ಇದ್ದರು.

Related posts: