RNI NO. KARKAN/2006/27779|Tuesday, January 27, 2026
You are here: Home » breaking news » ಗೋಕಾಕ:ಟೇಲರಗಳಿಗೆ ಮತ್ತು ಟೇಲರ ಅಂಗಡಿ ಮಾಲಿಕರಿಗೆ ಮತ್ತು ಕಾರ್ಮಿಕರಿಗೆ ಆರ್ಥಿಕ ನೆರವುಗಾಗಿ ಸಚಿವರಿಗೆ ಮನವಿ

ಗೋಕಾಕ:ಟೇಲರಗಳಿಗೆ ಮತ್ತು ಟೇಲರ ಅಂಗಡಿ ಮಾಲಿಕರಿಗೆ ಮತ್ತು ಕಾರ್ಮಿಕರಿಗೆ ಆರ್ಥಿಕ ನೆರವುಗಾಗಿ ಸಚಿವರಿಗೆ ಮನವಿ 

ಟೇಲರಗಳಿಗೆ ಮತ್ತು ಟೇಲರ ಅಂಗಡಿ ಮಾಲಿಕರಿಗೆ ಮತ್ತು ಕಾರ್ಮಿಕರಿಗೆ ಆರ್ಥಿಕ ನೆರವುಗಾಗಿ ಸಚಿವರಿಗೆ ಮನವಿ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 16 :

 

 
ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ದೇಶದಲ್ಲಿ ಲಾಕಡೌನ್ ಮಾಡಿದ ಹಿನ್ನೆಲೆಯಲ್ಲಿ ಇಲ್ಲಿಯ ಕರ್ನಾಟಕ ರಾಜ್ಯ ಟೇಲರ್ಸ್ ಅಸೋಶಿಯೇಶನ್ ಪದಾಧಿಕಾರಿಗಳು ಟೇಲರಗಳಿಗೆ ಮತ್ತು ಟೇಲರ ಅಂಗಡಿ ಮಾಲಿಕರಿಗೆ ಮತ್ತು ಕಾರ್ಮಿಕರಿಗೆ ಆರ್ಥಿಕ ನೆರವು ನೀಡಬೇಕೆಂದು ಆಗ್ರಹಿಸಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಶನಿವಾರಂದು ಮನವಿ ಸಲ್ಲಿಸಿದರು.
ಲಾಕಡೌನ್‍ದಿಂದಾಗಿ ಕರ್ನಾಟಕ ರಾಜ್ಯ ಟೇಲರ್ಸ್ ಅಸೋಶಿಯೇಶನ್ ಮಾಲಿಕರು ಹಾಗೂ ಕಾರ್ಮಿಕರು ಸದ್ಯ ಕೈಯಲ್ಲಿ ಕೆಲಸ ಇಲ್ಲದೇ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸಬೇಕಾಗಿದೆ. ಹಲವಾರು ವರ್ಷಗಳಿಂದ ಪ್ರತಿನಿತ್ಯ ಬಟ್ಟೆ ಹೊಲೆದು ಜೀವನ ಸಾಗಿಸುತ್ತಿದ್ದು ಈಗ ಜೀವನ ಸಾಗಿಸುವುದೇ ಕಷ್ಟಕರವಾಗಿದೆ ಆದ್ದರಿಂದ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಟೇಲರ್ಸ್ ಅಸೋಶಿಯೇಶನ್ ಸಂಘದ ತಾಲೂಕಾಧ್ಯಕ್ಷ ಪುಂಡಲೀಕ ರಂಗಸುಭೆ ,ಉಪಾಧ್ಯಕ್ಷ ನಜೀರಅಹ್ಮದ ಲಂಗೋಟಿ, ನಾರಾಯಣ ಭಟ್ಟ, ಸದಾಶಿವ ಚವ್ಹಾಣ, ರಾಜೇಶ ಮಾತಾಡೆ ಸೇರಿದಂತೆ ಇತರರು ಇದ್ದರು.

Related posts: