ಗೋಕಾಕ:ದಾನೇಶ್ವರಿ ಸ್ವಸಹಾಯ ಸಂಘದಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25ಸಾವಿರ ರೂಪಾಯಿ ದೇಣಿಗೆ
ದಾನೇಶ್ವರಿ ಸ್ವಸಹಾಯ ಸಂಘದಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25ಸಾವಿರ ರೂಪಾಯಿ ದೇಣಿಗೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 3 :
ಮಹಾಮಾರಿ ಕರೋನ ವೈರಸ್ ದೇಶಾಧ್ಯಂತ ಹರಡುತ್ತಿರುವ ಹಿನ್ನಲೆಯಲ್ಲಿ ತಾಲೂಕಿನ ಶಿವಾಪೂರ (ಕೊ) ಗ್ರಾಮದ ಶ್ರೀ ದಾನೇಶ್ವರಿ ಸ್ವಸಹಾಯ ಸಂಘದವರು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25ಸಾವಿರ ರೂಪಾಯಿ ದೇಣಿಗೆ ಚೇಕನ್ನು ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಅವರ ಮುಖಾಂತರ ನೀಡಿದರು.
ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಅವರು ಶ್ರೀ ದಾನೇಶ್ವರಿ ಸ್ವಸಹಾಯ ಸಂಘದವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೊಳಿನವರ, ನಗರಸಭೆ ಸದಸ್ಯ ಎಸ್ ಎ ಕೋತವಾಲ ಇದ್ದರು.