RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ: ರೋಗಿಗಳನ್ನು ಕೊಂಡೊಯ್ಯಲು ಇರುವ ವಿಲ್ಲಚೇರ್ , ಸ್ಟಾಕೇಚರ ದುರ್ಬಳಕೆ

ಗೋಕಾಕ: ರೋಗಿಗಳನ್ನು ಕೊಂಡೊಯ್ಯಲು ಇರುವ ವಿಲ್ಲಚೇರ್ , ಸ್ಟಾಕೇಚರ ದುರ್ಬಳಕೆ 

ರೋಗಿಗಳನ್ನು ಕೊಂಡೊಯ್ಯಲು ಇರುವ ವಿಲ್ಲಚೇರ್ , ಸ್ಟಾಕೇಚರ ದುರ್ಬಳಕೆ
ಗೋಕಾಕ ಅ 14: ತೀರಾ ಅಸ್ವಸ್ಥಗೊಂಡ ರೋಗಿಗಳನ್ನು ಕರೆದುಕೊಂಡು ಹೋಗಲು ಎಲ್ಲ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ವಿಲ್ಲಚೇರ್ ಮತ್ತು ಸ್ಟಾಕೇಚರಗಳನ್ನು ಬಳಕೆ ಮಾಡಲಾಗುತ್ತದೆ ಆದರೆ ಗೋಕಾಕಿನ ಸರಕಾರಿ ಆಸ್ಪತ್ರೆಯಲ್ಲಿ ಈ ವಿಲ್ಲಚೇರ್ ನ್ನು ರೋಗಿಗಳ ಗೋಸ್ಕರ ಬಳಸದೆ ಸಿಮೆಂಟ್ ಹಾಗೂ ಇತರೆ ಸಾಮಾಗ್ರಿಗಳನ್ನು ತರಲು ಬಳಸಲಾಗುತ್ತಿದೆ .

ಆಸ್ಪತ್ರೆ ಆವರಣದಲ್ಲಿ ಹೂತೋಟದ ಕೆಲಸ ಪ್ರಗತಿಯಲ್ಲಿದ್ದು ಈ ಕಾರ್ಯಕ್ಕಾಗಿ ಸಿಮೆಂಟ್ ಮತ್ತು
ಇನ್ನಿತರ ಸಾಮಾಗ್ರಿಗಳನ್ನು ತರಲು ಈ ವಿಲ್ಲಚೆರ ಬಳಸುತ್ತಿರುವುದು ಕಂಡು ಬಂದಿದೆ

ಜಿಲ್ಲೆಯ ಹಲವು ಆಸ್ಪತ್ರೆಗಳಲ್ಲಿ ವಿಲ್ಲಚೇರ್ ಮತ್ತು ಸ್ಟಾಕೇಚರಗಳಿಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಹಂತಹ ಆಸ್ಪತ್ರೆಗಳಿಗೆ ಈ ವಿಲ್ಲಚೇರಗಳನ್ನು ಕೋಡುವುದನ್ನು ಬಿಟ್ಟು ಅರ್ಥವಿಲ್ಲದ ಕಾರ್ಯಗಳಿಗೆ ಬಳಸುತ್ತಿರುವುದು ಸರಿಯಾದ ಕ್ರಮವಲ್ಲ ವೆಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ

ಆಸ್ಪತ್ರೆಯ ಅಧಿಕಾರಿಗಳು ಎಚ್ಚರಗೊಂಡು ವಿಲ್ಲಚೇರ ಮತ್ತು ಸ್ಟಾಕೇಚರಗಳನ್ನು ರೋಗಿಗಳ ಸಹಾಯಕ್ಕೆ ಬಳಸಲು ಮುಂದಾಗಬೇಕು ಒಂದು ವೇಳೆ ಆಸ್ಪತ್ರೆಯಲ್ಲಿ ವಿಲ್ಲಚೇರಗಳು ಅವಶ್ಯಕತೆಕ್ಕಿಂತ ಹೆಚ್ಚಿದರೆ ಯಾವ ಆಸ್ಪತ್ರೆಯಲ್ಲಿ ವಿಲ್ಲಚೇರಗಳು ಇಲ್ಲ ಆ ಆಸ್ಪತ್ರೆಗೆ ಕಳುಹಿಸಿ ಕೋಡಲು ಕ್ರಮ ಕೈಗೋಳಬೆಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

Related posts: