ಗೋಕಾಕ:ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ರಾಜ್ಯಪಾಲರ ರಾಜ್ಯ ಪುರಸ್ಕಾರ
ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ರಾಜ್ಯಪಾಲರ ರಾಜ್ಯ ಪುರಸ್ಕಾರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 7 :
ಇಲ್ಲಿಯ ಕೆ.ಎಲ್.ಇ. ಸಂಸ್ಥೆಯ ಮಹಾದೇವಪ್ಪಣ್ಣ ಮುನವಳ್ಳಿ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ರಾಜ್ಯಪಾಲರ ರಾಜ್ಯ ಪುರಸ್ಕಾರ ದೊರಕಿರುತ್ತದೆ.
ಸ್ಕೌಟ್ ವಿದ್ಯಾರ್ಥಿ ಪ್ರೇಮಸಾಗರ, ಗೈಡ್ಸ ವಿದ್ಯಾರ್ಥಿನಿ ಸ್ಪೂರ್ತಿ ಹೊಸಮನಿ, ಕಬ್ಸ ವಿದ್ಯಾರ್ಥಿನಿ ನೈತಿಕ ಹಿರೇಮಠ ಮತ್ತು ಬುಲ್‍ಬುಲ್ ವಿದ್ಯಾರ್ಥಿನಿ ರಕ್ಷಾ ಶೀತಲ ಅಥಣಿ ಅವರಿಗೆ ರಾಜ್ಯ ಪುರಸ್ಕಾರ ದೊರಕಿದ್ದು ಕೆಡೆಟ್‍ಗಳು ಈಚೆಗೆ ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಾಜುಬಾಯಿ ವಾಲಾ ಅವರು ರಾಜ್ಯ ಪುರಸ್ಕಾರ ನೀಡಿ ಗೌರವಿಸಿದರು.ಶಾಲೆಯ ಸ್ಕೌಟ್ ಮಾಸ್ಟರ ಪಿ.ವೈ.ಪಾಟೀಲ ಹಾಗೂ ಗೈಡ್‍ನ ಅಂಬಿಕಾ ಅವರು ತರಬೇತಿ ನೀಡಿದ್ದಾರೆ.