ಗೋಕಾಕ:ಪ್ರೀತಿ-ವಿಶ್ವಾಸದಿಂದ ಬಾಳುವದರ ಜೊತೆಗೆ ಸುಂದರ ಸಮಾಜ ನಿರ್ಮಾಣ ಮಾಡಬೇಕು : ಲಖನ್ ಜಾರಕಿಹೊಳಿ
ಪ್ರೀತಿ-ವಿಶ್ವಾಸದಿಂದ ಬಾಳುವದರ ಜೊತೆಗೆ ಸುಂದರ ಸಮಾಜ ನಿರ್ಮಾಣ ಮಾಡಬೇಕು : ಲಖನ್ ಜಾರಕಿಹೊಳಿ
ಗೋಕಾಕ ನ 25: ಧಾರ್ಮಿಕ ತಳಹದಿ ಮೇಲೆ ಎಲ್ಲರೂ ಪ್ರೀತಿ-ವಿಶ್ವಾಸದಿಂದ ಬಾಳುವದರ ಜೊತೆಗೆ ಸುಂದರ ಸಮಾಜ ನಿರ್ಮಾಣ ಮಾಡಬೇಕೆಂದು ಮಯೂರ ಶಾಲೆ ಚೇರಮನ್ ಹಾಗೂ ಉದ್ಯಮಿ ಲಖನ್ ಜಾರಕಿಹೊಳಿ ಹೇಳಿದರು.
ಅವರು ಶುಕ್ರವಾರದಂದು ಸಂಜೆ ನಗರದ ಶ್ರೀ ಮಹಾಲಕ್ಷ್ಮೀ ಪಾದಗಟ್ಟಿ ಕಾರ್ತಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಇಂದಿನ ಒತ್ತಡದ ಜೀವನದಲ್ಲಿ ನಗರ ಪ್ರದೇಶದ ಜನರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವದು ಒಳ್ಳೆಯ ಬೆಳವಣಿಗೆ. ಹಿರಿಯರು ಇಂಥ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾರ್ಗದರ್ಶನ ನೀಡಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅವುಗಳಲ್ಲಿ ಭಾಗವಹಿಸಿ ಅವರು ಧಾರ್ಮಿಕ ಮತ್ತು ನೈತಿಕತೆ ನೆಲೆಗಟ್ಟಿನಲ್ಲಿ ಸಾಗುವಂತೆ ಮಾಡಬೇಕೆಂದು ತಿಳಿಸಿದರು.
ವೇದಿಕೆ ಮೇಲೆ ಶ್ರೀ ಲಕ್ಷ್ಮೀದೇವಿ ಪಾದಗಟ್ಟಿ ಸೇವಾ ಸಮಿತಿ ಅಧ್ಯಕ್ಷ ಗಿರೀಶ ಖೋತ, ಜಿ.ಪಂ. ಸದಸ್ಯರಾದ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ಹೃದಯರೋಗ ತಜ್ಞ ಡಾ. ಸಿದ್ದಣ್ಣ ಕಮತ, ನಿವೃತ್ತ ಶಿಕ್ಷಕರಾದ ಡಿ.ಬಿ.ರಾಹುತ, ಎಸ್.ಜಿ.ಗಾಡವಿ ಇದ್ದರು.
ಕಾರ್ತಿಕೋತ್ಸವ ಅಂಗವಾಗಿ ಬೆಳಿಗ್ಗೆ 4-30ಕ್ಕೆ ಶ್ರೀ ಲಕ್ಷ್ಮೀದೇವಿ ಅಭಿಷೇಕ, 5 ಗಂಟೆಗೆ ಶ್ರೀ ಲಕ್ಷ್ಮೀದೇವಿ ಪಾದಗಟ್ಟಿಗೆ ಅಭಿಷೇಕ ಜರುಗಿತು. 10 ಗಂಟೆಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ನಂತರ ಶ್ರೀ ಲಕ್ಷ್ಮೀದೇವಿ ಪಾದಗಟ್ಟಿಯಿಂದ ಸುಮಂಗಲೆಯರೊಂದಿಗೆ ಆರತಿ, ಕುಂಭಮೇಳದೊಂದಿಗೆ ಶ್ರೀ ಲಕ್ಷ್ಮೀದೇವಿ ದೇವಸ್ಥಾನದವರೆಗೆ ಬೃಹತ್ ಮೆರವಣಿಗೆ ನಡೆಯಿತು.
ರಾತ್ರಿ ಜನ್‍ಪಾರ್ಕ ಬಡ್ರ್ಸ ಪ್ಲೇ ನರ್ಸರಿ ಶಾಲೆ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಶ್ರೀಮತಿ ರಜನಿ ಜೀರಗ್ಯಾಳ ಅವರ ಅಮ್ಮಾಜಿ ನೃತ್ಯ ಶಾಲೆ ವಿದ್ಯಾರ್ಥಿಗಳಿಂದ ನೃತ್ಯಗಳು ಜರುಗಿದವು.