ಕೌಜಲಗಿ:ಕೌಜಲಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು- ಸರ್ಕಾರಕ್ಕೆ ಕನ್ನಡ ಕೌಸ್ತುಭ ಆಗ್ರಹ

ಕೌಜಲಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು- ಸರ್ಕಾರಕ್ಕೆ ಕನ್ನಡ ಕೌಸ್ತುಭ ಆಗ್ರಹ
ಕೌಜಲಗಿ ಡಿ 7 : ರಾಜ್ಯದ ಅತಿ ದೊಡ್ಡ ಜಿಲ್ಲೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕನ್ನು ಜಿಲ್ಲೆಯಾಗಿಸಿ, ಗೋಕಾಕ ತಾಲ್ಲೂಕಿನ ಕೌಜಲಗಿ ಪಟ್ಟಣವನ್ನು ನೂತನ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಕೌಜಲಗಿ ಕನ್ನಡ ಕೌಸ್ತುಭ ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ.
ಪಟ್ಟಣದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಕೌಸ್ತುಭದ ಅಧ್ಯಕ್ಷ – ಸಾಹಿತಿ ಡಾ ರಾಜು ಕಂಬಾರ
ಕೌಜಲಗಿ ಪಟ್ಟಣವು 52 ವರ್ಷಗಳಿಂದ ತಾಲ್ಲೂಕು ರಚನೆಗಾಗಿ ಹೋರಾಡುತ್ತಿದೆ. ತಾಲ್ಲೂಕು ಪುನರ್‌ವಿಂಗಡಣಾ ಸಮಿತಿಗಳಾದ ಹುಂಡೇಕಾರ, ಗದ್ದಿಗೌಡರ, ವಾಸುದೇವ ಸಮಿತಿಗಳು ಕೌಜಲಗಿ ಪಟ್ಟಣವನ್ನು ತಾಲ್ಲೂಕಾಗಿಸಬೇಕೆಂದು ಶಿಫಾರಸ್ಸು ಮಾಡಿವೆ. ಇದೆ ಬೆಳಗಾವಿ ಅಧಿವೇಶನದಲ್ಲಿ ಗೋಕಾಕನ್ನು ಜಿಲ್ಲೆಯನ್ನಾಗಿಸಿ, ಹೋಬಳಿ ಕೇಂದ್ರವಾದ ಕೌಜಲಗಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು
ಕೌಸ್ತುಭ ಸಂಘಟನೆ ಸದಸ್ಯರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಕೌಸ್ತುಭದ ಸದಸ್ಯರಾದ ಜಗದೀಶ ಶಿವಾಪುರ, ರವಿ ಶಿವನಮಾರಿ, ಹರೀಶ ತೋಳನ್ನವರ, ರಮ್ಜಾನ ನಗಾರ್ಚಿ, ಕೆಂಪಣ್ಣ ಡೊಂಬರ, ಮಂಜು ಶಿವನಮಾರಿ, ಮಲ್ಲಿಕಾರ್ಜುನ ವಿರಕ್ತಮಠ ಮತ್ತು ಸಂತೋಷ ದಾಸರ ಭಾಗವಹಿಸಿದ್ದರು.
