RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಡಾ.ಪುಟ್ಟರಾಜ ಗವಾಯಿ 9ನೇ ಪುಣ್ಯಸ್ಮರಣೋತ್ಸವ ಆಚರಣೆ

ಗೋಕಾಕ:ಡಾ.ಪುಟ್ಟರಾಜ ಗವಾಯಿ 9ನೇ ಪುಣ್ಯಸ್ಮರಣೋತ್ಸವ ಆಚರಣೆ 

ಡಾ.ಪುಟ್ಟರಾಜ ಗವಾಯಿ 9ನೇ ಪುಣ್ಯಸ್ಮರಣೋತ್ಸವ ಆಚರಣೆ

 

 

ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಸೆ 9 :

 

 
ಪಟ್ಟಣದಲ್ಲಿ ಗದಗನ ಡಾ.ಪುಟ್ಟರಾಜ ಗವಾಯಿಗಳ 9ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮುಖಂಡ ಡಾ. ರಾಜೇಂದ್ರ ಸಣ್ಣಕ್ಕಿ ಗವಾಯಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ರವಿವರ್ಮ ಚೌಕದಲ್ಲಿ ರವಿವಾರ ಸರಳವಾಗಿ ಜರುಗಿದ ಡಾ.ಪುಟ್ಟರಾಜ ವಾಯಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪುಟ್ಟರಾಜ ಸ್ವಾಮಿಗಳ ದೇಹಕ್ಕೆ ಅಂಧತ್ವವಿತ್ತು ಆದರೆ ಅವರ ಸಂಗೀತ ಕಲೆಗೆ ದಿವ್ಯದೃಷ್ಟಿಯಿತ್ತು. ನಾಡಿನ ಸರ್ವಶ್ರೇಷ್ಠ ಸಂಗೀತ ಸಾಮ್ರಾಟರಾಗಿ ನೂರಾರು ಕುರುಡ ಜೀವಕ್ಕೆ ಬೆಳಕಾಗಿದ್ದರೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾ.ಪಂ. ಅಧ್ಯಕ್ಷ ನೀಲಪ್ಪ ಕೇವಟಿ, ಹೊಳೆಪ್ಪ ಯಲಿಗಾರ, ಯಲ್ಲಪ್ಪ ಬೆಣಚಿನಮರಡಿ, ನಾಗರಾಜ ಹುಂಡರದ, ಯಲ್ಲಪ್ಪ ಭಜಂತ್ರಿ, ಸಚೀನ ತೇಲಂಗ, ಮಲ್ಲಿಕಾರ್ಜುನ ವಿರಕ್ತಮಠ,ಚನ್ನಪ್ಪ ಹಿರೇಮಠ ಮುಂತಾದವರಿದ್ದರು.

Related posts: