RNI NO. KARKAN/2006/27779|Friday, August 21, 2026
You are here: Home » breaking news » ಗೋಕಾಕ:ಮಾನವ ತಮ್ಮ ಭಾವದಲ್ಲಿ ಭಗವಂತನ ಸ್ಮರಣೆ ಮಾಡಿಕೊಂಡು ಬದುಕನ್ನು ಶ್ರೀಮಂತ ಗೋಳಿಸಿಕೊಳ್ಳಬೇಕು: ಐ.ಆರ್.ಮಠಪತಿ

ಗೋಕಾಕ:ಮಾನವ ತಮ್ಮ ಭಾವದಲ್ಲಿ ಭಗವಂತನ ಸ್ಮರಣೆ ಮಾಡಿಕೊಂಡು ಬದುಕನ್ನು ಶ್ರೀಮಂತ ಗೋಳಿಸಿಕೊಳ್ಳಬೇಕು: ಐ.ಆರ್.ಮಠಪತಿ 

ಮಾನವ ತಮ್ಮ ಭಾವದಲ್ಲಿ ಭಗವಂತನ ಸ್ಮರಣೆ ಮಾಡಿಕೊಂಡು ಬದುಕನ್ನು ಶ್ರೀಮಂತ ಗೋಳಿಸಿಕೊಳ್ಳಬೇಕು: ಐ.ಆರ್.ಮಠಪತಿ
ಗೋಕಾಕ ಆ 21: ಮಾನವ ತಮ್ಮ ಭಾವದಲ್ಲಿ ಭಗವಂತನ ಸ್ಮರಣೆ ಮಾಡಿಕೊಂಡು ಬದುಕನ್ನು ಶ್ರೀಮಂತ ಗೋಳಿಸಿಕೊಳ್ಳಬೇಕು ಎಂದು ಹಾರೂಗೇರಿಯ ಶರಣ ವಿಚಾರ ವಾಹಿನಿಯ ಅಧ್ಯಕ್ಷ ಐ.ಆರ್‌.ಮಠಪತಿ ಹೇಳಿದರು.

ಶುಕ್ರವಾರದಂದು ನಗರದಲ್ಲಿ ಶ್ರೀ ಶಿವಯೋಗಿ ತತ್ವ ವಿಚಾರ ವೇದಿಕೆ ವತಿಯಿಂದ ಹಮ್ಮಿಕೊಂಡ ವಚನ ಶ್ರಾವಣ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಯೋಗ್ಯ ಸಂಸ್ಕಾರವನ್ನು ನೀಡಬೇಕು. ಮನಸ್ಸನ್ನು ಸುಂದರಗೋಳಿಸಕೊಳ್ಳಬೇಕು. ಜ್ಞಾನಕ್ಕಿಂತ ದೊಡ್ಡ ಸಂಪತ್ತು ಜೀವನದಲ್ಲಿ ಬೇರೊಂದಿಲ್ಲ, ಇಂದು ನಮ್ಮಲ್ಲಿ ಜ್ಞಾನದ ಕೋರತೆಯಿದೆ ಜ್ಞಾನವನ್ನು ಹೆಚ್ಚಾಗಿ ಸಂಪಾದಿಸಕೊಳ್ಳಬೇಕು. ಅವಿಭಕ್ತ ಕುಟುಂಬಗಳು ಇಂದು ಮಾಯವಾಗಿ ಮನೆಗಳು ಮಸನಗಳಾಗಿವೆ. ನಮ್ಮ ಬದುಕು ಸಮಾಜಮುಖಿ ಆಗಬೇಕು. ಅದ್ದಾಂಗ ನಾವು ಒಳ್ಳೆಯ ಸದೃಢ ಸಮಾಜ ನಿರ್ಮಿಸಲು ಸಾಧ್ಯ ಎಂದ ಅವರು ರಾತ್ರಿ ಬೇಗ ಮಲಗುವ ಮತ್ತು ಬೆಳಿಗ್ಗೆ ಬೇಗ ಏಳುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು. ಮುಂದಿನ ಪಿಳಿಗೆಗೆ ಧರ್ಮದ ಅರಿವು ಮೂಡಿಸಬೇಕು.ಇಂದು ಧರ್ಮ ಮನೆ,ಮನೆ ತಲುಪಬೇಕಾಗಿದೆ.ಮನೆಗಳು ಇಂದು ಚಿತ್ರಮಂದಿರದಗಳಾಗಿವೆ. ಅವುಗಳನ್ನು ಶಿವ ಮಂದಿರಗಳಾಗಿ ಮಾಡಬೇಕಾಗಿದೆ ಆ ನಿಟ್ಟಿನಲ್ಲಿ ನಾವು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶೂನ್ಯ ಸಂಪಾದನ ಮಠದ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು, ಬಟಕುರ್ಕಿಯ ಶ್ರೀ ಬಸವ ಪ್ರಭು ಮಹಾಸ್ವಾಮಿಗಳು, ಬಸವರಾಜ ಮುರುಗೋಡ, ಯಲ್ಲಪ್ಪ ಕುರುಬಗಟ್ಟಿ, ಸುರೇಶ ಸಾಲಿ, ಶಿವಪ್ಪ ಧರಿಗೌಡರ ಉಪಸ್ಥಿತರಿದ್ದರು.

Related posts: