RNI NO. KARKAN/2006/27779|Tuesday, November 4, 2025
You are here: Home » breaking news » ಗೋಕಾಕ:ಇಂದಿನಿಂದ ಮೂರು ದಿನಗಳ ಕಾಲ ಗೋಕಾಕದಲ್ಲಿ ಅಂಗವಿಕಲರಿಗೆ ಉಚಿತ ಕೃತಕ್ ಕಾಲು ಜೋಡಣೆ ಶಿಬಿರ

ಗೋಕಾಕ:ಇಂದಿನಿಂದ ಮೂರು ದಿನಗಳ ಕಾಲ ಗೋಕಾಕದಲ್ಲಿ ಅಂಗವಿಕಲರಿಗೆ ಉಚಿತ ಕೃತಕ್ ಕಾಲು ಜೋಡಣೆ ಶಿಬಿರ 

ಇಂದಿನಿಂದ ಮೂರು ದಿನಗಳ ಕಾಲ ಗೋಕಾಕದಲ್ಲಿ ಅಂಗವಿಕಲರಿಗೆ ಉಚಿತ ಕೃತಕ್ ಕಾಲು ಜೋಡಣೆ ಶಿಬಿರ

ಗೋಕಾಕ ಜು 14: ಇಲ್ಲಿಯ ಜೈನ ಶ್ವೇತಾಬಂರ ಹಾಗೂ ದಿಗಂಬರ ಸಮಾಜದ ವತಿಯಿಂದ ದೀನ ದಲಿತರ , ಬಡರೋಗಿಗಳ ಸೇವೆ ಮಾಡುವ ಉದ್ದೇಶದಿಂದ ಇಂದಿನಿಂದ 16/7/2017 ವರೆಗೆ 3 ದಿನಗಳ ಕಾಲ ಕೃತಕ ಕಾಲು ಜೋಡಣೆ ಉಚಿತ ಶಿಬಿರವನ್ನು ಏರ್ಪಡಿಸಲಾಗಿದೆ

ನಗರದ ಸಮೂದಾಯ ಭವನದಲ್ಲಿ ನಡೆದಿರುವ ಈ ಉಚಿತ ಶಿಬಿರದಲ್ಲಿ ವಿಧಿಯ ವಿಕೋಪಕ್ಕೆ ಸಿಲುಕಿ ಕೈ ಕಾಲು ಕಳೆದುಕೊಂಡವರಿಗೆ , ಹುಟ್ಟಿನಿಂದಲೇ ಅಂಗವಿಕಲತೆ ಹೊಂದಿದವರಿಗೆ ಉಚಿತವಾಗಿ ಕೃತಕ್ ಕೈ ಕಾಲು ಜೋಡಣೆ ಮಾಡಲಾಗುವುದು

ಶ್ರೀ ಜೈನ ಶ್ವೇತಾಬಂರ ,ದಿಗಂಬರ ಜೈನ ಸಮಾಜ , ಶ್ರೀ ನೇಮಿನಾಥ ಅರ್ಬನ್ ಕ್ರೆಡಿಟ್ ಸೌರ್ಹದ ಸಹಕಾರಿ ನಿ. , ದಿ.ಮಹಾವೀರ ಅರ್ಬನ್ ಕ್ರೇಡಿಟ್ ಸೌರ್ಹದ ಸಹಕಾರಿ ನಿ., ಇವರ ಸಂಯುಕ್ತಾಶ್ರಯದಲ್ಲಿ ರಾಜಸ್ಥಾನ ಹಾಸ್ಪಿಟಲ್ ಅಹಮದಾಬಾದ್ ನವರು ಕಳೆದ 35 ವರ್ಷದಿಂದ ಅಂಗವಿಕಲ ಸೇವೆ ಗೈಯುತ್ತಾ ಬಂದಿದ್ದಾರೆ ಗೋಕಾಕ ಮತ್ತು ಸುತ್ತಮುತ್ತಲಿನ ಜನರು ಈ ಉಚಿತ ಬೃಹತ್ ಶಿಬಿರದ ಸದುಪಯೋಗ ಪಡೆದುಕೋಳಬೇಕೆಂದು ನೇಮಿನಾಥ ಚಾರಿಟೇಬಲ ಟ್ರಸ್ಟ್ ನ ಗೌರವ ಕಾರ್ಯದರ್ಶಿ ಅಶೋಕ್ ಓಸ್ವಾಲ ಪತ್ರಿಕೆಗೆ ತಿಳಿಸಿದ್ದಾರೆ

ಬೆಳ್ಳಿಗೆ ನಡೆದ ಸಮಾರಂಭದಲ್ಲಿ ಸಮಾಜದ ಮುಖಂಡರಾದ ಮೋತಿಚಂದ ದರಗಶೇಟ್ಟಿ ,ವಿಜಯ ಕುಮಾರ್ ಖಾರೇಪಾಠಣ, ಸಂಘವಿ ಓಂಕಾರಮಲ್ ರಾಥೋಡ್ , ರಾಹುಲ್ ಕಿತ್ತೂರ , ಶೀತಲ್ ಡೊಂಗರೆ , ಶಹಾ ಚಂದುಲಾಲ ಜೈನ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: