ಬೆಳಗಾವಿ:ಊಟ ತಿಂಡಿ ತ್ಯಜಿಸಿ ಹಿಂಡಲಗಾ ಜೈಲಿನಲ್ಲಿ ಡಂಡುಪಾಳ್ಯಾ ಗ್ಯಾಂಗ್ ಪ್ರತಿಭಟನೆ
ಊಟ ತಿಂಡಿ ತ್ಯಜಿಸಿ ಹಿಂಡಲಗಾ ಜೈಲಿನಲ್ಲಿ ಡಂಡುಪಾಳ್ಯಾ ಗ್ಯಾಂಗ್ ಪ್ರತಿಭಟನೆ
ಬೆಳಗಾವಿ ಜು 12: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಡಂಡುಪಾಳ್ಯಾ ಹಂತಕರು ಪ್ರತಿಭಟನೆ ನಡೆಯಿಸಿದ ಘಟನೆ ನಡೆದಿದೆ
ಮಂಗಳವಾರ ಬೆಳಗ್ಗೆಯಿಂದ ತಿಂಡಿ-ಊಟ ಸೇವಿಸದೇ ಪ್ರತಿಭಟಿಸಿದ ದಂಡುಪಾಳ್ಯದ ಗ್ಯಾಂಗ್‌ನವರು ದಂಡುಪಾಳ್ಯ -2 ಚಲನಚಿತ್ರ ಬಿಡುಗಡೆಗೊಳಿಸದಂತೆ ಆಗ್ರಹಿಸಿದರು.
ಚಿತ್ರ ತಂಡದವರಿಗೆ ಎಷ್ಟೇ ಪತ್ರ ಬರೆದರೂ ನಮ್ಮನ್ನ ಭೇಟಿ ಮಾಡಿಲ್ಲವೆಂದು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ದಂಡುಪಾಳ್ಯ2 ಚಿತ್ರದ ನಿರ್ಮಾಪಕರು, ನಿರ್ದೇಶಕರು ನಮ್ಮೊಂದಿಗೆ ಮಾತನಾಡಿಲ್ಲ. ಹೀಗಾಗಿ ಚಿತ್ರ ಬಿಡುಗಡೆಯನ್ನು ನಾವು ವಿರೋಧಿಸುತ್ತೇವೆ ಎಂದು ಪ್ರತಿಭಟನೆ ನಡೆಸಿದರು. ಈ ವೇಳೆ ಜೈಲು ಅಧಿಕಾರಿಗಳಿಂದ ದಂಡುಪಾಳ್ಯದ ಗ್ಯಾಂಗ್ ಮನವೊಲಿಸುವ ಯತ್ನ ನಡೆಯಿತು