RNI NO. KARKAN/2006/27779|Thursday, July 3, 2025
You are here: Home » breaking news » ಗೋಕಾಕ:ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೋಳುವದರಿಂದ ಸುಖಶಾಂತಿ ಸಮೃದ್ಧಿ ದೊರೆಯುತ್ತದೆ : ಶಾಸಕ ರಮೇಶ

ಗೋಕಾಕ:ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೋಳುವದರಿಂದ ಸುಖಶಾಂತಿ ಸಮೃದ್ಧಿ ದೊರೆಯುತ್ತದೆ : ಶಾಸಕ ರಮೇಶ 

ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೋಳುವದರಿಂದ ಸುಖಶಾಂತಿ ಸಮೃದ್ಧಿ ದೊರೆಯುತ್ತದೆ : ಶಾಸಕ ರಮೇಶ

ಗೋಕಾಕ ಜು 2 : ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೋಳುವದರಿಂದ ದೇವರ ಅನುಗ್ರಹಕ್ಕೆ ಪಾತ್ರರಾಗಿ ಸುಖಶಾಂತಿ ಸಮೃದ್ಧಿ ದೊರೆಯುತ್ತದೆ ಎಂದು ಶಾಸಕ ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಹೇಳಿದರು.

ಬುಧವಾರದಂದು ನಗರದ ಸೋಮವಾರ ಪೇಟೆಯಲ್ಲಿ ಗೋಕಾಕ ಗ್ರಾಮದೇವತೆಯರ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು .
ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಮಹತ್ವ ವಿದೆ. ದುಷ್ಟ ಶಕ್ತಿಗಳಿಂದ ಗ್ರಾಮಗಳನ್ನು ರಕ್ಷಿಸಿ ಗ್ರಾಮದೇವತೆಯರು ನೆಮ್ಮದಿಯ ಜೀವನವನ್ನು ನೀಡುತ್ತಾರೆ. ಈ ದೇವತೆಯರ ಅನುಗ್ರಹಕ್ಕೆ ಪಾತ್ರರಾಗಲು ಆನಾಧಿಕಾಲದಿಂದಲೂ ಜಾತ್ರೆಗಳನ್ನು ಆಚರಿಸುತ್ತಾ ಬಂದಿದ್ದಾರೆ. ನಾವೆಲ್ಲರೂ ಇಂತಹ ಕಾರ್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗೋಣ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಯುವ ಧುರೀಣರಾದ ಅಮರನಾಥ ಜಾರಕಿಹೊಳಿ, ಸನತ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಆದಿತ್ಯಾ ಜಾರಕಿಹೊಳಿ, ಆರ್ಯ ಜಾರಕಿಹೊಳಿ ಹಾಗೂ ಜಾತ್ರಾ ಕಮಿಟಿಯ ಪ್ರಭಾಕರ ಚವ್ಹಾಣ, ಸಗೀರ ಕೋತವಾಲ ಸೇರಿದಂತೆ ಲಕ್ಷಾಂತರ ಭಕ್ತಾದಿಗಳು ಉಪಸ್ಥಿತರಿದ್ದರು.

Related posts: