RNI NO. KARKAN/2006/27779|Tuesday, July 8, 2025
You are here: Home » breaking news » ಗೋಕಾಕ:ಲಕ್ಷಾಂತರ ಭಕ್ತರ ನಡುವೆ ಅತಿವಿಜೃಂಭನೆಯಿಂದ ನಡೆದ ಎರಡನೇ ದಿನದ ರಥೋತ್ಸವ

ಗೋಕಾಕ:ಲಕ್ಷಾಂತರ ಭಕ್ತರ ನಡುವೆ ಅತಿವಿಜೃಂಭನೆಯಿಂದ ನಡೆದ ಎರಡನೇ ದಿನದ ರಥೋತ್ಸವ 

ಲಕ್ಷಾಂತರ ಭಕ್ತರ ನಡುವೆ ಅತಿವಿಜೃಂಭನೆಯಿಂದ ನಡೆದ ಎರಡನೇ ದಿನದ ರಥೋತ್ಸವ

ಗೋಕಾಕ ಜು 3 : ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಗುರುವಾರದಂದು ರಥೋತ್ಸವ ಲಕ್ಷಾಂತರ ಭಕ್ತರ ನಡುವೆ ಅತಿವಿಜೃಂಭನೆಯಿಂದ ನಡೆಯಿತು.ಎರಡನೇ ದಿನದ ರಥೋತ್ಸವಕ್ಕೆ ಶಾಸಕ ಹಾಗೂ ಜಾತ್ರಾ ಕಮೀಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಚಾಲನೆ ನೀಡಿದರು.
ನಗರದ ಶ್ರೀ ದ್ಯಾಮವ್ವ ದೇವಿಯ ದೇವಸ್ಥಾನದಿಂದ ಹಳೆ ಮುನ್ಸಿಪಾಲ್ಟಿ ಕಚೇರಿ, ಚಾವಡಿ ರಸ್ತೆ ಮಾರ್ಗವಾಗಿ ಒಂದು ರಥ ನಗರದ ಕ್ರೀಮ್ ಕಾರ್ನರ ವರೆಗೆ ತಲುಪಿತು. ಇನ್ನೊಂದು ರಥ ಅದೇ ರಥ ಬೀದಿಯ ಮೂಲಕ ಚೌಧರಿ(ಬಾಫನಾ)ಕೂಟ ವರೆಗೆ ತಲುಪಿತು. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡರು.
ರಥೋತ್ಸವದ ಉದ್ದಕ್ಕೂ ಶ್ರೀ ಮಹಾಲಕ್ಷ್ಮೀದೇವಿಯ ಜಯಕಾರ ಘೋಷಣೆಗಳು ಮೊಳಗಿದವು. ವಿವಿಧ ವಾದ್ಯಮೇಳ ಹಾಗೂ ಕಲಾ ತಂಡಗಳು ಭಾಗಿಯಾಗಿದ್ದು ರಥೋತ್ಸವ ಸಂದರ್ಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಜಿಟಿ ಜಿಟಿ ಮಳೆಯಾಯಿತು. ಮಳೆಯಲ್ಲಿ ಮಹಿಳೆಯರು, ಯುವಕರು ರಥ ಬೀದಿಯಲ್ಲಿ ಕುಣಿದು ಕುಪ್ಪಳಿಸಿದರು.
ರಥೋತ್ಸವದಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಯುವ ಕಾಂಗ್ರೇಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ, ಯುವ ನಾಯಕರಾದ ಅಮರನಾಥ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಸನತ ಜಾರಕಿಹೊಳಿ, ಹಿರಿಯ ರಾಜಕೀಯ ಮುಖಂಡ ಅಶೋಕ ಪೂಜಾರಿ, ಜಾತ್ರಾ ಕಮೀಟಿಯ ಸದಸ್ಯರಾದ ಪ್ರಭಾಕರ ಚವ್ಹಾಣ, ಬಸವಣ್ಣೆಪ್ಪ ಬನ್ನಿಶೆಟ್ಟಿ, ಶ್ರೀಪಾದ ದೇಶಪಾಂಡೆ, ಅಶೋಕ ಹೆಗ್ಗಣ್ಣವರ, ಅಡಿವೇಪ್ಪ ಕಿತ್ತೂರ ಸೇರಿದಂತೆ ಅನೇಕರು ಇದ್ದರು.

Related posts: