ಗೋಕಾಕ:ನೂತನವಾಗಿ ನಿರ್ಮಿಸಿದ ಪೋಲಿಸ್ ಚೌಕಿ ಉದ್ಘಾಟಿಸಿದ ಅಮರನಾಥ ಜಾರಕಿಹೊಳಿ

ನೂತನವಾಗಿ ನಿರ್ಮಿಸಿದ ಪೋಲಿಸ್ ಚೌಕಿ ಉದ್ಘಾಟಿಸಿದ ಅಮರನಾಥ ಜಾರಕಿಹೊಳಿ
ಗೋಕಾಕ ಜು 1 : ನಗರದ ನಾಕಾ ನಂ 1 ರಲ್ಲಿ ಇಲ್ಲಿನ ಜೆ.ಸಿ.ಐ ಸಂಸ್ಥೆ ಅವರು ಜನದಟ್ಟನೆ ನಿಯಂತ್ರಿಸಲು ಪೊಲೀಸ್ ಇಲಾಖೆಗೆ ನೂತನವಾಗಿ ನಿರ್ಮಿಸಿ ಕೊಟ್ಟ ಪೋಲಿಸ್ ಚೌಕಿಯನ್ನು
ಮಂಗಳವಾರದಂದು ಯುವ ಧುರೀಣ ಅಮರನಾಥ ಜಾರಕಿಹೊಳಿ ಉದ್ಘಾಟಿಸಿ ಇಲಾಖೆಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷ ಪ್ರಕಾಶ್ ಮುರಾರಿ, ಡಿ.ವಾಯ್.ಎಸ್.ಪಿ. ರವಿ ನಾಯಿಕ, ಜೆ.ಸಿ.ಐ ಅಧ್ಯಕ್ಷ ಶಿವಲಿಂಗ ಕೆ, ಜೆ.ಸಿ.ಐ ರಾಷ್ಟ್ರೀಯ ಸಂಯೋಜಕ ವಿಷ್ಣು ಲಾತೂರ, ಶೇಖರ್ ಉಳ್ಳಾಗಡ್ಡಿ, ನೇತ್ರಾವತಿ ಲಾತೂರ, ರವೀಂದ್ರ ಕಿತ್ತೂರು, ಬಸವರಾಜ ಗಂಗರೆಡ್ಡಿ, ಖಾಜಾಸಾಹೇಬ ದಬಾಡಿ, ಸಂತೋಷ ಹವಲದಾರ, ಚಂದ್ರು ಹಳ್ಳಿ, ರಜನಿಕಾಂತ್ ಮಾಳೋದೆ, ಯಲ್ಲಪ್ಪ ಹಳ್ಳೂರ, ಪ್ರಕಾಶ್ ಕಿತ್ತೂರ, ರಮಾಕಾಂತ ಕೋಸದಲ್ಲ್, ಸುನೀಲ್ ಶೆಟ್ಟಿ, ಮಹ್ಮದ ದಬಾಡಿ, ರಾಮಚಂದ್ರ ಕಾಕಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.