ಮೂಡಲಗಿ:ಧರ್ಮಟ್ಟಿ-ಮೂಡಲಗಿ ರಸ್ತೆ ನಿರ್ಮಾಣಕ್ಕೆ 10 ಲಕ್ಷ ರೂ ಹಣ : ಗ್ರಾಮಸ್ಥರ ಹರ್ಷ.
ಧರ್ಮಟ್ಟಿ-ಮೂಡಲಗಿ ರಸ್ತೆ ನಿರ್ಮಾಣಕ್ಕೆ 10 ಲಕ್ಷ ರೂ ಹಣ : ಗ್ರಾಮಸ್ಥರ ಹರ್ಷ.
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮೇ 21 :
ಧರ್ಮಟ್ಟಿ ಗ್ರಾಮದಿಂದ ಮೂಡಲಗಿ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಮಂಗಳವಾರದಂದು ತಾ.ಪಂ ಮಾಜಿ ಸದಸ್ಯ ಭೀಮಪ್ಪ ಪೂಜೇರಿ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಧರ್ಮಟ್ಟಿ ಗ್ರಾಮದಿಂದ ಮೂಡಲಗಿ ವರೆಗಿನ 6 ಕಿ.ಮಿ. ರಸ್ತೆಯು ಹದಗೆಟ್ಟಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಯನ್ನು ಗಮನಿಸಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸ್ವಂತ ಹಣ 10 ಲಕ್ಷ ರೂಗಳನ್ನು ರಸ್ತೆ ಕಾಮಗಾರಿಗೆ ನೀಡಿದ್ದಾರೆ. ಧರ್ಮಟ್ಟಿ ಗ್ರಾಮಸ್ಥರ ಪರವಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು, ಅರಭಾಂವಿ ಕ್ಷೇತ್ರದ ಶಾಸಕರಾಗಿ ಜನ ಸೇವೆ ಮಾಡುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರು ಧರ್ಮಟ್ಟಿ ಗ್ರಾಮದ ಅಭಿವೃದ್ದಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಜನಸೇವೆಯೇ ಜನಾರ್ದನ ಸೇವೆ ಎಂಬ ತತ್ವದಡಿ ಎಲ್ಲ ಸಮಾಜಗಳ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿರುವ ಇಂತಹ ಅಭಿವೃದ್ದಿ ಹರಿಕಾರನನ್ನು ಪಡೆದಿರುವ ನಾವೆಲ್ಲ ಧನ್ಯರು ಎಂದು ಶಾಸಕರ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಡಿಎಸ್‍ಎಸ್ ಮುಖಂಡ ಲಕ್ಷ್ಮಣ ತೆಳಗಡೆ, ಪಿಕೆಪಿಎಸ್ ಅಧ್ಯಕ್ಷ ಪರಸಪ್ಪ ಸನದಿ, ಮೂಡಲಗಿ ಪುರಸಭೆ ಮಾಜಿ ಸದಸ್ಯರಾದ ರಮೇಶ ಸಣ್ಣಕ್ಕಿ, ಮರೆಪ್ಪ ಮರೆಪ್ಪಗೋಳ, ಪ್ರಮುಖರಾದ ಲಕ್ಕಪ್ಪ ತೆಳಗಡೆ, ಸಿದ್ದಯ್ಯ ಹಿರೇಮಠ, ಬನಪ್ಪ ಕೊರಕಪೂಜೇರಿ, ಲಕ್ಕಪ್ಪ ಧರ್ಮಣ್ಣಗೋಳ, ಲಗಮಣ್ಣ ಕುಟ್ರಿ, ನಿಂಗಪ್ಪ ಹಾರುಗೊಪ್ಪ, ಪುಂಡಲೀಕ ಮಾದರ, ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.