RNI NO. KARKAN/2006/27779|Thursday, September 17, 2026
You are here: Home » breaking news » ಗೋಕಾಕ:ನಗರದ ಎಪಿಎಮ್‍ಸಿ ಆವರಣದಲ್ಲಿ ಮೇವು ಬ್ಯಾಂಕ್‍ಗೆ ಚಾಲನೆ

ಗೋಕಾಕ:ನಗರದ ಎಪಿಎಮ್‍ಸಿ ಆವರಣದಲ್ಲಿ ಮೇವು ಬ್ಯಾಂಕ್‍ಗೆ ಚಾಲನೆ 

ನಗರದ ಎಪಿಎಮ್‍ಸಿ ಆವರಣದಲ್ಲಿ ಮೇವು ಬ್ಯಾಂಕ್‍ಗೆ ಚಾಲನೆ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 20 :

 

ನಗರದ ಎಪಿಎಮ್‍ಸಿ ಆವರಣದಲ್ಲಿ ಬರಗಾಲದ ನಿಮಿತ್ಯ ಜಾನವಾರುಗಳಿಗೆ ಮೇವಿನ ಕೊರತೆಯನ್ನು ಹೋಗಲಾಡಿಸಲು ಸೋಮವಾರದಂದು ಮೇವು ಬ್ಯಾಂಕ್‍ಗೆ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು ಚಾಲನೆ ನೀಡಿದರು.
ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ಮೋಹನ ಕಮತ ಅವರು ಪತ್ರಿಕೆಯೊಂದಿಗೆ ಮಾತನಾಡಿ ಬರಗಾಲದ ಹಿನ್ನಲೆಯಲ್ಲಿ ಗೋಕಾಕ ತಾಲೂಕಿನಲ್ಲಿ ಮೇವಿನ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ರೈತರಿಗೆ ಅನುಕೂಲ ಮಾಡಿಕೊಡಲು ಈ ಮೇವು ಬ್ಯಾಂಕ್‍ನ್ನು ಸ್ಥಾಪಿಸಲಾಗಿದ್ದು, ಕೆ.ಜಿ.ಗೆ 2ರೂಗಳಂತೆ ವಿತರಿಸಲಾಗುವುದು ಇದರ ಉಪಯೋಗವನ್ನು ರೈತರು ಪಡೆಯಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಉಪತಹಶೀಲದಾರ ವಾಯ್.ಎಲ್.ಡಬ್ಬನವರ, ಕಂದಾಯ ನಿರೀಕ್ಷಕ ಎಸ್.ಬಿ.ಕಟ್ಟಿಮನಿ, ಪಶು ಸಂಗೋಪನಾ ಇಲಾಖೆಯ ಡಾ|| ಶಶಿಕಾಂತ ಕೌಜಲಗಿ, ಗ್ರಾಮ ಲೆಕ್ಕಾಧಿಕಾರಿಗಳಾದ ಡಿ.ಎಸ್.ದೇಸಾಯಿ, ಆರ್.ಎಸ್.ಕಾಗಲಕರ ಸೇರಿದಂತೆ ಅನೇಕರು ಇದ್ದರು.

Related posts:

ಮೂಡಲಗಿ:ಅಂಬೇಡ್ಕರ್ ಭವನವನ್ನು ವಿವಿಧ ಸಾಮಾಜಿಕ ಕಾರ್ಯಗಳಿಗಾಗಿ ಬಳಕೆ ಮಾಡಿಕೊಳ್ಳಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ:ನದಿ ತೀರದ ಗ್ರಾಮಗಳ ಸ್ಥಳಾಂತರಕ್ಕೆ ಶಾಸಕರ ಸೂಚನೆ ಬೆಳಗಾವಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅರಭಾವಿ ಶಾಸಕ ಬಾಲಚ…

ಬೆಳಗಾವಿ : ಮದಕರಿ ನಾಯಕರು ಮಾಡಿದ ಸಮಾಜಮುಖಿ ಕಾರ್ಯಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು : ಸರ್ವೋತ್ತಮ ಜಾರಕಿಹೊಳಿ