RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ರೇವಕ್ಕ ಪುಂಡಲೀಕಪ್ಪ ಪೂಜಾರಿ ನಿಧನ

ಗೋಕಾಕ:ರೇವಕ್ಕ ಪುಂಡಲೀಕಪ್ಪ ಪೂಜಾರಿ ನಿಧನ 

ರೇವಕ್ಕ ಪುಂಡಲೀಕಪ್ಪ ಪೂಜಾರಿ ನಿಧನ

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಜ 15 :

 
ಗ್ರಾಮದ ಪತ್ರಕರ್ತ ಅಡಿವೇಶ ಮುಧೋಳ ಅವರ ಸಹೋದರಿ(ಅಕ್ಕ), ಜಮಖಂಡಿ ತಾಲೂಕಿನ ಚಿಮ್ಮಡ ಗ್ರಾಮದ ನಿವಾಸಿ, ಲಿಂಗಾಯತ ಸಮಾಜದ ಹಿರಿಯರಾದ ರೇವಕ್ಕ ಪುಂಡಲೀಕಪ್ಪ ಪೂಜಾರಿ(65) ಅವರು ರವಿವಾರ ಜ.12 ರಂದು ಅನಾರೋಗ್ಯದಿಂದ ನಿಧನರಾದರು. ಮೃತರು ಪತಿ, ಐದು ಜನ ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಸಹೋದರರು, ಸಹೋದರಿಯರು, ಸೇರಿದಂತೆ ಅಪಾರ ಬಂದು-ಬಳಗವನ್ನಗಲಿದ್ದಾರೆ.
ಸಂತಾಪ:ತೆರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ, ಮಾಜಿ ಸಚಿವೆ, ಚಲನಚಿತ್ರ ನಟಿ ಉಮಾಶ್ರೀ, ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಸ್ಥಳೀಯ ಹಾಗೂ ಸುತ್ತಲಿನ ನಗರ, ಪಟ್ಟಣ, ಹಳ್ಳಿಗಳ ರಾಜಕೀಯ ಮುಖಂಡರು, ಗಣ್ಯರು ಚಿಮ್ಮಡ ಗ್ರಾಮದ ಲಿಂಗಾಯತ ಸಮಾಜದ ಹಿರಿಯರಾದ ರೇವಕ್ಕ ಪೂಜಾರಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ನಿಧನಕ್ಕೆ ತೀವ್ರ ಸಂತಾಪ ಶೋಕ ವ್ಯಕ್ತಪಡಿಸಿದ್ದಾರೆ.

Related posts: