RNI NO. KARKAN/2006/27779|Monday, July 14, 2025
You are here: Home » breaking news » ಗೋಕಾಕ:ಅರಭಾವಿ ಗ್ರಾಮದಲ್ಲಿ ಅರಣ್ಯ ಸಚಿವ ಸತೀಶ ಮತಯಾಚನೆ

ಗೋಕಾಕ:ಅರಭಾವಿ ಗ್ರಾಮದಲ್ಲಿ ಅರಣ್ಯ ಸಚಿವ ಸತೀಶ ಮತಯಾಚನೆ 

ಅರಭಾವಿ ಗ್ರಾಮದಲ್ಲಿ ಅರಣ್ಯ ಸಚಿವ ಸತೀಶ ಮತಯಾಚನೆ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 11:

 
ಬೆಳಗಾವಿ ಲೋಕಸಭಾ ಅಭ್ಯರ್ಥಿ ಡಾ.ವಿ.ಎಸ್ ಸಾಧುನ್ನವರ ಪರ ಸಚಿವ ಸತೀಶ ಜಾರಕಿಹೊಳಿ ಇಂದು ಅರಭಾವಿ ಮತಕ್ಷೇತ್ರದ ಅರಭಾವಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು

ಈ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿಮಾಡಿಕೊಂಡು ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲಾಗಿದೆ . ಮತದಾರರು ಕೋಮುವಾದಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಪಕ್ಷಕ್ಕೆ ಬೆಂಬಲಿಸದೆ ಬೆಳಗಾವಿ ಲೋಕಸಭಾ ಮೈತ್ರಿ ಅಭ್ಯರ್ಥಿ ಡಾ.ಸಾಧುನ್ನವರ ಅವರಿಗೆ ತಮ್ಮ ಮತ ನೀಡಿ ಗೆಲ್ಲಿಸಿ ಕಾಂಗ್ರೆಸ್ ಪಕ್ಷದ ಕೈ ಬಲ ಪಡಿಸಬೇಕೆಂದು ಮನವಿ ಮಾಡಿದರು. ಈ ವೇಳೆ ಹಲವಾರು ಯುವಕರು ಬಿಜೆಪಿ ತೋರೆದು ಕಾಂಗ್ರೆಸ್ ಬೆಂಬಲಿಸುವದಾಗಿ ಸಚಿವರಿಗೆ ಭರವಸೆ ನೀಡಿದರು

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಂಕರ ಬಿಲಕುಂದಿ , ರಾಯಪ್ಪ ಬಂಡಿವಡ್ಡರ , ಅಶೋಕ ಅಂಗಡಿ , ಭೀಮಶಿ ಶಿಲ್ಲನ್ನವರ , ಹೈನಾಜ ಕೋಳಿ , ವಿಠಲ ಸವದತ್ತಿ , ಕೆಂಚಪ್ಪ ಮಂಟೂರ , ಮೋಹನ ಬಂಡಿವಡ್ಡರ , ಶಾಂತು ಜೈನ್ ,ಮುತ್ತೆಪ್ಪಾ ಹಳ್ಳೂರ , ಸಿದಪ್ಪಾ ಅಂತಗಟ್ಟಿ , ಈರಪ್ಪ ಹೊಲದವರ , ಅಶೋಕ ಪೂಜೇರಿ , ಭೀಮಪ್ಪ ಗೌಡಿ , ಸಚಿವರ ಆಪ್ತರಾದ ಪ್ರಕಾಶ ಬಾಗೇವಾಡಿ , ಪಾಂಡು ಮನ್ನೀಕೇರಿ , ಆರೀಪ ಪೀರಜಾದೆ ಸೇರಿದಂತೆ ಇತರರು ಉಪಸ್ಥಿತರಿದ್ದರು

Related posts: