RNI NO. KARKAN/2006/27779|Friday, February 13, 2026
You are here: Home » breaking news » ಗೋಕಾಕ:ಕಾಂಗ್ರೆಸ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಜಯಗಳಿಸುವದು ನಿಶ್ಚಿತ : ಸಚಿವ ಸತೀಶ ವಿಶ್ವಾಸ

ಗೋಕಾಕ:ಕಾಂಗ್ರೆಸ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಜಯಗಳಿಸುವದು ನಿಶ್ಚಿತ : ಸಚಿವ ಸತೀಶ ವಿಶ್ವಾಸ 

ಕಾಂಗ್ರೆಸ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಜಯಗಳಿಸುವದು ನಿಶ್ಚಿತ : ಸಚಿವ ಸತೀಶ ವಿಶ್ವಾಸ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಎ.10-

 

ಜಿಲ್ಲೆಯ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಜಯಗಳಿಸುವದು ನಿಶ್ಚಿತ ಎಂದು ಅರಣ್ಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಇಂದಿಲ್ಲಿ ತಿಳಿಸಿದರು.
ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ಕರೆದ ಬೆಂಬಲಿಗರ ಸಭೆಯಲ್ಲಿ ಮಾತನಾಡುತ್ತಿದ್ದರು.
ಕೋಮುವಾದಿ, ಪ್ರಜಾಪ್ರಭುತ್ವ ವಿರೋಧಿ ಮಹಾ ಸುಳ್ಳಗಾರ ನರೇಂದ್ರ ಮೋದಿ ಸರಕಾರವನ್ನು ಸೋಲಿಸುವದು ಇಂದಿನ ಅವಶ್ಯಕತೆಯಾಗಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸುವದು ಅವಶ್ಯಕವಿದೆ ಎಂದರು.
ದಿ. 12ರಿಂದ ಗೋಕಾಕ ಮತಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಭೇಟಿ ಪ್ರಚಾರ ನಡೆಸಲಾಗುವದು ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಸಿದ್ಧಲಿಂಗ ದಳವಾಯಿ, ಅಶೋಕ ಪಾಟೀಲ, ಶಂಕರ ಗಿಡ್ಡನವರ, ಕುಬೇಂದ್ರ ಕಲಾಲ, ಶಿವು ಪಾಟೀಲ, ಪಾಂಡು ಮನ್ನಿಕೇರಿ, ಸಚಿನ್ ಜಾಧವ, ರಿಯಾಜ ಚೌಗಲಾ, ರಾಜು ಮೇದಾರ, ವಿವೇಕ ಜತ್ತಿ, ಬಸವರಾಜ ಖಾನಪ್ಪನವರ, ನ್ಯಾಯವಾದಿ ಎಸ್.ಎನ್. ಹತ್ತಿಕಟಗಿ, ಆರೀಫ ಪೀರಜಾದೆ, ಮಂಜೂರ ಶಮ್‍ಶೇರ ಸೇರಿದಂತೆ ಅನೇಕರು ಇದ್ದರು.

Related posts: