RNI NO. KARKAN/2006/27779|Saturday, August 2, 2025
You are here: Home » breaking news » ಬೆಳಗಾವಿ : ಮುತಾಲಿಕ್ ಮನೆಗೆ ಬೆಂಗಳೂರು ಪೊಲೀಸರ ಭೇಟಿ : ಪರಿಶೀಲನೆ

ಬೆಳಗಾವಿ : ಮುತಾಲಿಕ್ ಮನೆಗೆ ಬೆಂಗಳೂರು ಪೊಲೀಸರ ಭೇಟಿ : ಪರಿಶೀಲನೆ 

ಬೆಳಗಾವಿಯ ಮುತಾಲಿಕ್ ಮನೆಗೆ ಬೆಂಗಳೂರು ಪೊಲೀಸರ ಭೇಟಿ : ಪರಿಶೀಲನೆ

ಬೆಳಗಾವಿ ಜು 5 : ಬೆಂಗಳೂರಿನ ಹೈಗ್ರೌಂಡ್ಸ ಪೊಲೀಸ ಠಾಣೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ವಿರುದ್ಧ ಪ್ರಕರಣ ದಾಖಲಾದ ಪರಿಣಾಮ ಬೆಂಗಳೂರು ಪೊಲೀಸರು ಬೆಳಗಾವಿಯಲ್ಲಿರುವ ಪ್ರಮೋದ್ ಮುತಾಲಿಕ್ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಇಂದು ಮುತಾಲಿಕ್ ಮನೆಗೆ ಭೇಟಿ ನೀಡಿದ ಎಸಿಪಿ ನೇತೃತ್ವದ ತಂಡದ ಅಧಿಕಾರಿಗಳು, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಶೋಧ ಕಾರ್ಯ ನಡೆಸಿದರು. ಇನ್ನು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆಯಲ್ಲಿ ಪ್ರಮೋದ್‌‌ ಮುತಾಲಿಕ್‌‌ ಇರಲಿಲ್ಲ. ಆಗ ಇನ್ನೊಂದು ಕೊಠಡಿ ಬೀಗ ಹಾಕಿದ್ದನ್ನ ಗಮನಿಸಿದ ಪೊಲೀಸರು ಬೀಗ ಮುರಿದು ಪರಿಶೀಲನೆ ಮಾಡಿದ್ರು. 

ನಂತರ ಬೆಳಗಾವಿ ನಗರ ಹಾಗೂ ಗ್ರಾಮೀಣ ಪ್ರದೇಶ ಮತ್ತು ಹುಕ್ಕೇರಿ ತಾಲೂಕಿನಲ್ಲಿ ಪ್ರಮೋದ್‌ ಮುತಾಲಿಕ್‌‌ಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಇದುವರೆಗೂ ಮುತಾಲಿಕ್‌‌ ಪತ್ತೆಯಾಗಿಲ್ಲ

Related posts: