RNI NO. KARKAN/2006/27779|Thursday, April 25, 2024
You are here: Home » breaking news » ಗೋಕಾಕ:ಪದವಿ ವಿದ್ಯಾಭ್ಯಾಸ ಮಾಡುವುದು ವಿದ್ಯಾರ್ಥಿ ವೃತ್ತಿ ಬದುಕಿನ ಶಿಕ್ಷಣವಾಗಿದೆ : ಮಲ್ಲಿಕಾರ್ಜುನ ಹಿರೇಮಠ

ಗೋಕಾಕ:ಪದವಿ ವಿದ್ಯಾಭ್ಯಾಸ ಮಾಡುವುದು ವಿದ್ಯಾರ್ಥಿ ವೃತ್ತಿ ಬದುಕಿನ ಶಿಕ್ಷಣವಾಗಿದೆ : ಮಲ್ಲಿಕಾರ್ಜುನ ಹಿರೇಮಠ 

ಪದವಿ ವಿದ್ಯಾಭ್ಯಾಸ ಮಾಡುವುದು ವಿದ್ಯಾರ್ಥಿ ವೃತ್ತಿ ಬದುಕಿನ ಶಿಕ್ಷಣವಾಗಿದೆ : ಮಲ್ಲಿಕಾರ್ಜುನ ಹಿರೇಮಠ

 

 
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಪೆ 21 :

 

 

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಾಲಾ, ಕಾಲೇಜು ಮಕ್ಕಳು ಎಷ್ಟು ಓದಿದರೂ ಕಡಿಮೆ. ಪಿಯು ಕಾಲೇಜು ವಿದ್ಯಾಭ್ಯಾಸ ಮುಗಿದ ಬಳಿಕ ಪದವಿ ವಿದ್ಯಾಭ್ಯಾಸ ಮಾಡುವುದು ವಿದ್ಯಾರ್ಥಿ ವೃತ್ತಿ ಬದುಕಿನ ಶಿಕ್ಷಣವಾಗಿದೆ ಎಂದು ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ಹಿರೇಮಠ ಹೇಳಿದರು.
ಸ್ಥಳೀಯ ಎಸ್‍ವೈಸಿ ಶಿಕ್ಷಣ ಸಂಸ್ಥೆಯ ಶ್ರೀ ಸದ್ಗುರು ಯಲ್ಲಾಲಿಂಗ ಸ್ವತಂತ್ರ ಪದವಿಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಫೆ.21 ರಂದು ನಡೆದ ಶ್ರೀ ಸದ್ಗುರು ಯಲ್ಲಾಲಿಂಗ ಸ್ವತಂತ್ರ ಪದವಿಪೂರ್ವ ಕಾಲೇಜು ಮತ್ತು ಬಸವಲಿಂಗ ಪ್ರಭು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ಪ್ರಸಕ್ತ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಿ.ಯು.ಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಡಕೋಳದ ತ್ರೀವಿಧ ದಾಸೋಹಮೂರ್ತಿ ಸಿದ್ರಾಯಜ್ಜನವರು ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು. ಎಸ್‍ವೈಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ದು ವಡೇರ ಅಧ್ಯಕ್ಷತೆ ವಹಿಸಿದ್ದರು. ಎಸ್‍ವೈಸಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಬಸವರಾಜ ಕುರಬೇಟ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕ್ರೀಡಾ ಮತ್ತು ಸಾಂಸ್ಕøತಿಕ ವಿಭಾಗದ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಭಾಷಣ, ಸಾಂಸ್ಕøತಿಕ ಮನರಂಜನೆಯ ಕಾರ್ಯಕ್ರಮಗಳು ನಡೆದವು.
ಹನುಮಂತ ವಡೇರ, ಮಹಾದೇವ ಹೊರಟ್ಟಿ, ಮಾರುತಿ ಚಂದರಗಿ, ರಮೇಶ ಹಾಲಣ್ಣವರ, ವಿಠ್ಠಲ ಸಣ್ಣಕ್ಕಿ, ಮುಖ್ಯ ಶಿಕ್ಷಕಿ ಆರ್.ಎಸ್.ಪೊಲೀಸ್‍ನವರ, ಸ್ಥಳೀಯ ಎಸ್‍ವೈಸಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಶಿಕ್ಷಣ ಪ್ರೇಮಿಗಳು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಇತರರು ಇದ್ದರು.
ಪ್ರಾಚಾರ್ಯ ಸಿ.ಜಿ.ಹೂಗಾರ ಸ್ವಾಗತಿಸಿದರು. ವಿರುಪಾಕ್ಷಯ್ಯ ಮಠಪತಿ ಕಾರ್ಯಕ್ರಮ ನಿರೂಪಿಸಿದರು. ಜಿ.ಎಚ್.ಚಿಗದಿನ್ನಿ ಕೊನೆಗೆ ವಂದಿಸಿದರು.

Related posts: