RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ವೀರ ಮರಣ ಹೊಂದಿದ ಯೋಧರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ : ಮೋಶಿನ ಖೋಜಾ ಕಂಬನಿ

ಗೋಕಾಕ:ವೀರ ಮರಣ ಹೊಂದಿದ ಯೋಧರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ : ಮೋಶಿನ ಖೋಜಾ ಕಂಬನಿ 

ವೀರ ಮರಣ ಹೊಂದಿದ ಯೋಧರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ : ಮೋಶಿನ ಖೋಜಾ ಕಂಬನಿ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 20 :

 

 

ಕಳೆದ ಕೆಲ ದಿನಗಳ ಹಿಂದೆ ವೀರ ಮರಣ ಹೊಂದಿದ ಯೋಧರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲೆಂದು ತಂಜೀಮ ಶಿಕ್ಷಣ ಸಂಸ್ಥೆ ಚೇರಮನ ಮೋಶಿನ ಖೋಜಾ ಕಂಬನಿ ಮಿಡಿದರು

ಬುಧವಾರದದಂದು ನಗರದ ತಂಜೀಮ ಶಿಕ್ಷಣ ಸಂಸ್ಥೆ ಪುಲ್ವಾಮಾ ದಾಳಿಯಲ್ಲಿ ವೀರ ಮರಣ ಹೊಂದಿದ ಯೋಧರ ಗೌರವಾರ್ಥ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪದೇ ಪದೇ ಭಯೋತ್ಪಾದಕರು ಭಾರತದ ಸೈನಿಕರ ಮೇಲೆ ನಡೆಸುತ್ತಿರುವ ದಾಳಿಯ ಕೃತ್ಯವು ಪೈಶಾಚಿಕ ಕೃತ್ಯವಾಗಿದ್ದು ಈ ಕೃತ್ಯವನ್ನು ಸಮಸ್ತ ಮುಸ್ಲಿಂ ಮುಖಂಡರು ಬಲವಾಗಿ ಖಂಡಿಸುತ್ತೇವೆ. ಕೇಂದ್ರ ಸರಕಾರ ಇಂತಹ ಪೈಶಾಚಿಕ ಕೃತ್ಯಗಳು ನಡೆಯದಂತೆ ಕಠಿಣ ಕ್ರಮ ಕೈಗೊಂಡು ವೀರಮರಣ ಹೊಂದಿದ ಕುಟುಂಬಗಳಿಗೆ ಸರಕಾರದಿಂದ ಸಿಗಬೇಕಾದ ಸಕಲ, ಸಹಾಯ ಸವಲತ್ತುಗಳು ತಕ್ಷಣದಲ್ಲಿ ಮುಟ್ಟುವಂತೆ ಸೂಕ್ತ ಕ್ರಮ ಕೈಗೊಂಡು ಅವರಿಗೆ ನೈತಿಕ ಬಲವನ್ನು ತುಂಬಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ತಂಜೀಮ ಶಿಕ್ಷಣ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿ ವೀರ ಮರಣ ಹೊಂದಿದ ಯೋಧರಿಗೆ ಮೌನಾಚರಣೆ ನಡೆಸುವ ಮುಖಾಂತರ ಗೌರವ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಮೌಲಾನಾ ಬಶೀರವುಲ್ಲಾ ಹಕ್ಕು ವೀರಯೋಧರ ಗೌರವಾದರ ಪ್ರಾರ್ಥನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಎಸ್.ಎ ಕೋತವಾಲ, ಎ. ಎ. ದೇಸಾಯಿ, ಕುತುಬುದ್ದೀನ ಗೋಕಾಕ, ಅಂಜುಮನ್- ಇಸ್ಲಾಂ ಕಮಿಟಿಯ ಅಧ್ಯಕ್ಷ  ಜಾವೀದ ಗೋಕಾಕ, ಮುಸ್ತಾಕ ಖಂಡಾಯತ, ಸಲೀಮ ಖೋಜಾ, ಮಲೀಕ ಪೈಲವಾನ, ಅಬ್ದುಲಹಯೀಂ ತೇರದಾಳ, ಬುಡ್ಡೇಖಾನ್, ಸಾದಿಕ್ ಹಲ್ಯಾಳ, ಮುಗುಟ ಪೈಲವಾನ, ಇರ್ಷಾದ್ ಪಟೇಲ, ಶರೀಫ ಮುಧೋಳ, ದಾದಾಸಾಬ ಇಮಾರತವಾಲೆ, ಫಿರೋಜ್ ನಾಯಕ, ಹಾಪಿಜ ಯುನುಸ, ಇಲಾಯಿ ಖೈರದಿ, ಸಮಿ ತೇರದಾಳ, ಫಾರೂಕ ಖೈರದಿ, ಶಿಕ್ಷಕರಾದ ಅಷ್ಪಾಕ್ ಶಬಾಶಖಾನ, ಎಮ್, ಎನ್, ಮಿರ್ಜನ್ನವರ, ಹಾಫೀಜ್ ಜತ್ತಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Related posts: