RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ;ಗೋಕಾಕ ಮತ್ತು ಮೂಡಲಗಿ ವಲಯ ವ್ಯಾಪ್ತಿಯ ಬಿಆರ್‍ಸಿ ಕಛೇರಿಗಳಿಗೆ ಡಿಡಿಪಿಐ ಎಮ್ ಜಿ ದಾಸರ ಭೇಟಿ

ಗೋಕಾಕ;ಗೋಕಾಕ ಮತ್ತು ಮೂಡಲಗಿ ವಲಯ ವ್ಯಾಪ್ತಿಯ ಬಿಆರ್‍ಸಿ ಕಛೇರಿಗಳಿಗೆ ಡಿಡಿಪಿಐ ಎಮ್ ಜಿ ದಾಸರ ಭೇಟಿ 

ಗೋಕಾಕ ಮತ್ತು ಮೂಡಲಗಿ ವಲಯ ವ್ಯಾಪ್ತಿಯ ಬಿಆರ್‍ಸಿ ಕಛೇರಿಗಳಿಗೆ ಡಿಡಿಪಿಐ ಎಮ್ ಜಿ ದಾಸರ ಭೇಟಿ

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 5 :
ರಾಜ್ಯ ಸರಕಾರ ವಿದ್ಯಾರ್ಥಿಗಳಿಗೆ ನೀಡಲು ಉದ್ದೇಶಿಸಿರುವ ಶಿಷ್ಯವೇತನಕ್ಕೆ ಮಕ್ಕಳು ಅರ್ಜಿ ಸಲ್ಲಿಸಿದ್ದು, ಕಾರಣಾಂತರಗಳಿಂದ ತಾಂತ್ರಿಕ ತೊಂದರೆಯಿಂದ ಬ್ಯಾಂಕಗಳ ಖಾತೆಗೆ ಸೀಡ್ ಆಗಿರುವದಿಲ್ಲ. ಅಂತಹ ಖಾತೆಗಳಿಗೆ ಕೊಡಲೆ ಎಲ್ಲರೂ ತಮ್ಮ ವಿದ್ಯಾರ್ಥಿಗಳ ಖಾತೆಗಳಿಗೆ ಆಧಾರ ಕಾರ್ಡ್‍ಗಳನ್ನು ಜೊಡನೆ ಮಾಡಬೇಕೆಂದು ಚಿಕ್ಕೋಡಿ ಡಿಡಿಪಿಐ ಎಮ್ ಜಿ ದಾಸರ ಹೇಳಿದರು.
ಅವರು ಮಂಗಳವಾರ ಗೋಕಾಕ ಮತ್ತು ಮೂಡಲಗಿ ವಲಯ ವ್ಯಾಪ್ತಿಯ ಬಿಆರ್‍ಸಿ ಕಛೇರಿಗಳಿಗೆ ಭೇಟಿ ನೀಡಿ ಆಧಾರ ಸೀಡಿಂಗ್ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದರು. ಶೈಕ್ಷಣಿಕವಾಗಿ ಮುಂದುವರೆಯಲು ಹಣಕಾಸಿನ ನೇರವು ನೀಡಲು ಸರಕಾರ ಎಸ್ಸಿ,ಎಸ್ಟಿ,ಹಿಂದೂಳಿದ ಹಾಗೂ ಅಲ್ಪಸಂಖ್ಯಾತರ ವಿಧ್ಯಾರ್ಥಿಗಳಿಗೆ ಶಿಷ್ಯವೇತನ ನೀಡುತ್ತಿದೆ. ಸರಕಾರ ಕೊಡಲ್ಪಡುವ ಪ್ರೋತ್ಸಾಹಕ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯ ಪಾಲಕರ ಶಿಕ್ಷಕರ ಮೇಲಾಧಿಕಾರಿಗಳ ಕರ್ತವ್ಯವಾಗಿದೆ. ಮೂಡಲಗಿ ಮತ್ತು ಗೋಕಾಕ ವಲಯ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ವಿದ್ಯಾರ್ಥಿಗಳ ಸೀಡಿಂಗ್ ಕಾರ್ಯವನ್ನು ಪೂರ್ಣಗೊಳಿಸಲು ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಬಿ ಬಳಗಾರ, ಎ.ಸಿ ಮನ್ನಿಕೇರಿ ಮಾತನಾಡಿ, ವಲಯದಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾದಿಸುವದರ ಜೊತೆಯಲ್ಲಿ ಸರಕಾರದ ಪ್ರೋತ್ಸಾಹಕ ಯೋಜನೆಗಳನ್ನು ಮಗುವಿಗೆ ಮುಟ್ಟಿಸುವ ಮಹತ್ತರ ಜವಾಬ್ದಾರಿ ನಮ್ಮದಾಗಿದೆ. ಆದಷ್ಟು ಬೇಗನೆ ಆಧಾರ ಸೀಡಿಂಗ್ ಕಾರ್ಯ ಪೂರ್ಣಗೊಳಿಸಿ ಕಲಿಕಾ ಕಾರ್ಯಕ್ಕೆ ಅಣಿಯಾಗುವದು ಅವಶ್ಯಕವಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಂಪರ್ಕದಲ್ಲಿದ್ದು ಬೇಗನೆ ಕಾರ್ಯ ಕೈಗೋಳ್ಳಲು ತಿಳಿಸಿದರು.
ಮೂಡಲಗಿ ವಲಯದ ಬಿ.ಆರ್‍ಸಿ, ಆನೆನ್ನವರ ತೋಟದ ಶಾಲೆ ಹಾಗೂ ಲೋಳಸೂರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗೋಕಾಕ ಬಿಆರ್‍ಸಿ, ಐಇಆರ್‍ಟಿ ಕೇಂದ್ರಗಳಿಗೆ ಭೇಟಿ ನೀಡಿ ಕಲಿಕಾ ಚಟುವಟಿಕೆಗಳನ್ನು ವಿಕ್ಷೀಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಚಿಕ್ಕೋಡಿ ಡೈಟ್‍ನ ಹಿರಿಯ ಉಪನ್ಯಾಸಕ ಎಮ್.ಡಿ.ಬೇಗ್, ಸಮನ್ವಯಾಧಿಕಾರಿಗಳಾದ ಎಮ್.ಬಿ ಪಾಟೀಲ, ಬಿ.ಎಚ್ ಮೊರೆ, ಬಿ.ಆರ್.ಪಿಗಳಾದ ಕೆ.ಎಲ್.ಮೀಶಿ, ಎಸ್.ಎಸ್ ದೇಶಪಾಂಡೆ, ಎಮ್.ಎನ್ ಜಮಖಂಡಿ, ಪಿ.ಜಿ ಪಾಟೀಲ, ಎ.ಬಿಚವಡನ್ನವರ, ಬಿ.ಎಮ್ ನಂದಿ, ಐಇಆರ್‍ಟಿಗಳಾದ ಎಸ್.ಬಿ ಕೊಂತಿ, ವಾಯ್.ಬಿ ಪಾಟೀಲ, ವಾಯ್ ಆರ್ ಮುಕ್ಕನ್ನವರ ಹಾಗೂ ಗೋಕಾಕ ಮೂಡಲಗಿ ವಲಯ ವ್ಯಾಪ್ತಿಯ ಸಿಅರ್‍ಪಿಗಳು ಸಂಪನ್ಮೂಲ ಶಿಕ್ಷಕರು ಉಪಸ್ಥಿತರಿದ್ದರು.

Related posts: