ಗೋಕಾಕ:ಪೇಜಾವರ ಶ್ರೀಗಳ ಇಫ್ತಾರ್ ಕೂಟಕ್ಕೆ ವಿರೋಧ : ಗೋಕಾಕಿನಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ಪೇಜಾವರ ಶ್ರೀಗಳ ಇಫ್ತಾರ್ ಕೂಟಕ್ಕೆ ವಿರೋಧ : ಗೋಕಾಕಿನಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ಗೋಕಾಕ ಜು 3: ಉಡಪಿಯ ಶ್ರೀಕೃಷ್ಣಮಠದಲ್ಲಿ ಫೇಜಾವರ ಶ್ರೀಗಳು ಮುಸ್ಲಿಂ ಸಮುದಾಯದವರಿಗೆ ಇಫ್ತಾರ್ ಕೂಟ ಮತ್ತು ನಮಾಜ ಮಾಡಲು ಅವಕಾಶ ಕಲ್ಪಿಸಿದನ್ನು ಖಂಡಿಸಿ ಗೋಕಾಕಿನಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಯಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಶ್ರೀಕೃಷ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ರಾಮ ನಾಮ ಜಫವನ್ನು ಮಾಡಿ ತಮ್ಮ ಆಕ್ರೋಶ ಹೊರಹಾಕಿದರು.
ಪೇಜಾವರ ಶ್ರೀಗಳು ಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದನ್ನ ಶ್ರೀರಾಮಸೇನೆ ಖಂಡಿಸಿದೆ. ಇಫ್ತಾರ್ ಕೂಟ ಏರ್ಪಡಿಸಿರುವ ಪೇಜಾವರ ಶ್ರೀಗಳ ನಡೆಯನ್ನು ಶ್ರೀರಾಮ ಸೇನೆ ಖಂಡಿಸಿ ನಿನ್ನೆ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದೆ
ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆಯ ಮುಖಂಡ ರಾಜು ಜಾಧವ , ಸುನೀಲ ಮುರಕೀಭಾಂವಿ , ನಗರ ಬಿಜೆಪಿ ಪ್ರಮುಖ ಶಶಿಧರ ದೇಮಶೆಟ್ಟಿ , ಬಸವ ಸೈನ್ಯ ಅಧ್ಯಕ್ಷ ಆನಂದ ಗೋಟಡಕಿ , ಆನಂದ ಹೋಳೆಗಾರ , ಬಸು ಪಡತಾರೇ , ಅನೀಲ ಖನಗಾವಿ , ವಿನಾಯಕ ಕೋಕಾಟೆ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು