ಗೋಕಾಕ:ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿ ಉಳಿವಿಗಾಗಿ ಪ್ರಯತ್ನಿಸಿ :ಯುವ ಧುರೀಣ ಲಖನ್ ಜಾರಕಿಹೊಳಿ
ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿ ಉಳಿವಿಗಾಗಿ ಪ್ರಯತ್ನಿಸಿ :ಯುವ ಧುರೀಣ ಲಖನ್ ಜಾರಕಿಹೊಳಿ
ಗೋಕಾಕ ಸೆ 10: ಕನ್ನಡ ಪರ ಸಂಘಟನೆಗಳು ನಾಡಿನ, ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿ ಉಳಿವಿಗಾಗಿ ಪ್ರಯತ್ನಿಸಬೇಕೆಂದು ನಗರದ ಯುವ ಧುರೀಣ ಲಖನ್ ಜಾರಕಿಹೊಳಿ ಹೇಳಿದರು.
ಅವರು, ನಗರದ ಲಖನ್ ಜಾರಕಿಹೊಳಿ ಕಾರ್ಯಾಲಯದಲ್ಲಿ ಕರ್ನಾಟಕ ಯುವ ಸೇನೆ ಸಂಘಟನೆಯ ತಾಲೂಕ ಘಟಕದ ಪದಾಧಿಕಾರಿಗಳು ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಯುವ ಧುರೀಣ ಲಖನ್ ಜಾರಕಿಹೊಳಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಇಂದಿನ ಯುಗದಲ್ಲಿ ಕನ್ನಡ ಉಳಿವಿಗಾಗಿ ಪ್ರತಿಯೊಬ್ಬರು ಕಂಕಣಬದ್ಧರಾಗಬೇಕೆಂದು ಯುವಕರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಯುಸೇ ರಾಜ್ಯ ಕಾರ್ಯದರ್ಶಿ ಕೆಂಪಣ್ಣ ಚೌಕಾಶಿ, ತಾಲೂಕಾಧ್ಯಕ್ಷ ದಸ್ತಗೀರ ಜಮಾದಾರ, ಉಸ್ತುವಾರಿ ಅಧ್ಯಕ್ಷ ಮಹೇಶ ಬೆಳಗಾಂವಕರ, ಸಂಚಾಲಕ ಜಾವೇದ ಖತೀಬ್, ಜಿಲ್ಲಾಧ್ಯಕ್ಷ ಈರಣ್ಣ ಸಂಗಮನವರ, ಜಿಲ್ಲಾ ಉಪಾಧ್ಯಕ್ಷ ಮಾರುತಿ ಸಿಂಗಾರಿ, ತಾಲೂಕ ಕಾರ್ಯದರ್ಶಿ ಶಂಕರ ಮುಗನ್ನವರ ಇತರರು ಇದ್ದರು.