ಗೋಕಾಕ:ಕೇಂದ್ರದ ಮಾಜಿ ಸಚಿವ, ಹಿರಿಯ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರಿಗೆ ಶೃದ್ಧಾಂಜಲಿ
ಕೇಂದ್ರದ ಮಾಜಿ ಸಚಿವ, ಹಿರಿಯ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರಿಗೆ ಶೃದ್ಧಾಂಜಲಿ
ಗೋಕಾಕ ಜ 29 : ಇಂದು ಬೆಳಗಿನ ಜಾವ ನಿಧನಹೊಂದಿದ ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.
ಅರಭಾವಿ ಮಂಡಲ ಬಿಜೆಪಿ ಘಟಕದಿಂದ ನಗರದಲ್ಲಿರುವ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ದಿ.ಜಾರ್ಜ್ ಫರ್ನಾಂಡಿಸ್ ಅವರ ಭಾವಚಿತ್ರಕ್ಕೆ ಯುವ ಧುರೀಣ ನಾಗಪ್ಪ ಶೇಖರಗೋಳ ಅವರು ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು.
ಜಾರ್ಜ್ ಫರ್ನಾಂಡಿಸ್ ಅವರ ನಿಧನದಿಂದಾಗಿ ಮುತ್ಸದ್ಧಿ ಸಮಾಜವಾದಿ ನಾಯಕನೊಬ್ಬನನ್ನು ದೇಶ ಕಳೆದುಕೊಂಡಂತಾಗಿದೆ. ಕೇಂದ್ರದ ರೈಲ್ವೆ ಹಾಗೂ ರಕ್ಷಣಾ ಸಚಿವರಾಗಿ ವಿಶಿಷ್ಟವಾಗಿ ಸೇವೆ ಸಲ್ಲಿಸಿದ್ದನ್ನು ಶೇಖರಗೋಳ ಅವರು ಸ್ಮರಿಸಿಕೊಂಡರು.
ಮಂಡಲ ರೈತಮೋರ್ಚಾ ಅಧ್ಯಕ್ಷ ಸಂಜು ಹೊಸಕೋಟಿ, ಲಕ್ಷ್ಮಣಗೌಡ ಪಾಟೀಲ, ಲಂಕೆಪ್ಪ ಬಡಿಗವಾಡ, ಬಾಳಪ್ಪ ಕಪರಟ್ಟಿ, ಅಶೋಕ ಬಳಿಗಾರ, ಪಾಂಡುರಂಗ ಪಾಟೀಲ, ಮಹಾದೇವ ಹಾರೂಗೇರಿ, ನಾಗಪ್ಪ ಹೊಲದವರ, ಕೆ.ಬಿ. ಬಿರಾದಾರ ಪಾಟೀಲ, ಪ್ರಕಾಶ ಹಿರೇಮೇತ್ರಿ, ಬಿಜೆಪಿ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.