ಗೋಕಾಕ:ರಮೇಶ ಜಾರಕಿಹೊಳಿ ಆಯ್ಕೆಗೆ ಅಭಿನಂದನೆ ಕೋರಿದ ಜೆಡಿಎಸ್ ಪರಾಜಿತ ಅಭ್ಯರ್ಥಿ ಆಶೋಕ ಪೂಜಾರಿ

ರಮೇಶ ಜಾರಕಿಹೊಳಿ ಆಯ್ಕೆಗೆ ಅಭಿನಂದನೆ ಕೋರಿದ ಜೆಡಿಎಸ್ ಪರಾಜಿತ ಅಭ್ಯರ್ಥಿ ಆಶೋಕ ಪೂಜಾರಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 9 :
ರಮೇಶ ಜಾರಕಿಹೊಳಿಯವರು ವಿಧಾನಸಭೆ ಸದಸ್ಯರಾಗಿ ಪುನರ್ ಆಯ್ಕೆಯಾಗಿರುವುದಕ್ಕೆ ಅವರನ್ನು ಹೃತಪೂರ್ವಕವಾಗಿ ಅಭಿನಂದಿಸುತ್ತೇನೆ. ಮುಂದಿನ ದಿನಮಾನಗಳಲ್ಲಿ ಗೋಕಾಕ ತಾಲೂಕಿನ ಮತ್ತು ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಅವರು ಕೈಗೊಳ್ಳುವ ಎಲ್ಲ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಈ ಚುನಾವಣೆಯ ಕುರಿತು ಅನೇಕ ವಿಚಾರಗಳನ್ನು ಸಾರ್ವಜನಿಕರ ಮತ್ತು ಮತದಾರರ ಗಮನಕ್ಕೆ ತರುವುದು ಅತ್ಯಂತ ಅವಶ್ಯಕವಿದ್ದು, ಒಂದೇರಡು ದಿನಗಳಲ್ಲಿ ಮನದಾಳದ ಎಲ್ಲ ಮಾತುಗಳನ್ನು ಮಾಧ್ಯಮದ ಮೂಲಕ ಸಾರ್ವಜನಿಕವಾಗಿ ತಿಳಿಸಲು ಭಯಸಿದ್ದೇನೆ ಎಂದು ಜೆ.ಡಿ.ಎಸ್. ಪರಾಜಿತ ಅಭ್ಯರ್ಥಿ ಅಶೋಕ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
