ಗೋಕಾಕ:ಲಿಂ. ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಶ್ರೀಗಳು ಭಕ್ತರಿಗೆ ಪ್ರೇರಣಾ ಶಕ್ತಿಯಾಗಿದ್ದರು : ಖಾನಪ್ಪನವರ ಕಂಬನಿ
ಲಿಂ. ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಶ್ರೀಗಳು ಭಕ್ತರಿಗೆ ಪ್ರೇರಣಾ ಶಕ್ತಿಯಾಗಿದ್ದರು : ಖಾನಪ್ಪನವರ ಕಂಬನಿ
ಗೋಕಾಕ ಜ 21 : ಲಿಂ. ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಶ್ರೀಗಳು ಭಕ್ತರಿಗೆ ಪ್ರೇರಣಾ ಶಕ್ತಿಯಾಗಿದ್ದರು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ. ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿ ನಿಧನ ಹಿನ್ನಲೆಯಲ್ಲಿ ನಗರದ ಕರವೇ ಕಾರ್ಯಾಲಯದಲ್ಲಿ ಸೋಮವಾರ ಜ.21 ರಂದು ನಡೆದ ಶ್ರದ್ಧಾಂಜಲಿ ಶೋಕ ಸಭೆಯಲ್ಲಿ ಮಾತನಾಡಿದ ಅವರು, ನಡೆದಾಡುವ ದೇವರು, ತ್ರಿವಿಧ ದಾಸೋಹಿ ತುಮಕೂರು ಸಿದ್ದಗಂಗಾ ಮಠದ ಲಿಂ. ಡಾ. ಶಿವಕುಮಾರ ಮಹಾಸ್ವಾಮಿಗಳ ಅಗಲಿಕೆಯಿಂದ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ. ಸಮಾನತೆಯ ಹರಿಕಾರರಾಗಿ, ಶಾಂತಿ ಸದ್ಭಾವನೆಯ ಮೂಲಕ ನೀತಿ ನಿರೂಪಣೆ ಮಾಡುತ್ತಿದ್ದ ಲಿಂ. ಡಾ. ಶಿವಕುಮಾರ ಶ್ರೀಗಳ ತತ್ವಾರ್ದಶಗಳನ್ನು ನಾವು ಪಾಲಿಸಬೇಕು ಶ್ರೀಗಳ ನಿಧನದಿಂದ ಈ ನಾಡು ಒಬ್ಬ ಮಹಾನ್ ಸಂತ ಶ್ರೇಷ್ಠರನನ್ನು ಕಳೆದುಕೊಂಡಂತಾಗಿದೆ ಎಂದು ಖಾನಪ್ಪನವರ ಹೇಳಿದರು
ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ , ಕೃಷ್ಣಾ ಖಾನಪ್ಪನವರ , ಬಸವರಾಜ ಹತ್ತರಕಿ , ಬಾಹುಬಲಿ ಖಾರೇಪಠಣ , ನಾರಾಯಣ ವಾಗುಲೆ , ರಾಜೇಂದ್ರ ಕೆಂಚನಗುಡ್ಡ , ಯಲ್ಲಪ್ಪ ಧರ್ಮಟ್ಟಿ , ಸೇರಿದಂತೆ ಅನೇಕರು ಇದ್ದರು